105 Years Old Woman New Record : 100 ಮೀಟರ್ ರೇಸ್ ನಲ್ಲಿ 105ರ ಅಜ್ಜಿ ಹೊಸ ದಾಖಲೆ  

1 min read
105-years-old-woman-new-record saaksha tv

105-years-old-woman-new-record saaksha tv

105 Years Old Woman New Record : 100 ಮೀಟರ್ ರೇಸ್ ನಲ್ಲಿ 105ರ ಅಜ್ಜಿ ಹೊಸ ದಾಖಲೆ  

105 ವರ್ಷದ ರಾಮ್ ಬಾಯಿ 100 ಮೀಟರ್ ಓಟದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

ಭಾನುವಾರ ವಡೋದರಾದಲ್ಲಿ ನಡೆದ ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಓಟದ ಭಾಗವಾಗಿ 45.40 ಸೆಕೆಂಡುಗಳಲ್ಲಿ ರಾಮ್ ಬಾಯಿ ಅವರು ಗುರಿ ತಲುಪಿದ್ದಾರೆ.

ವರದಿಗಳ ಪ್ರಕಾರ, ರಾಮ್ ಬಾಯಿ ಹೊರತುಪಡಿಸಿ ಬೇರೆ ಯಾರೂ ಓಟದಲ್ಲಿ ಭಾಗವಹಿಸಲಿಲ್ಲವಂತೆ.  

ಕೇವಲ 100 ವರ್ಷಗಳ ಮೇಲಿನವರಿಗೆ ನಿರ್ವಹಿಸಿದ ರೇಸ್ ನಲ್ಲಿ ರಾಮ್ ಬಾಯಿ ಮಾತ್ರ ಭಾಗಿಯಾಗಿದ್ದರು.

105-years-old-woman-new-record  saaksha tv
105-years-old-woman-new-record saaksha tv

ಯಾರೂ ಸ್ಪರ್ಧೆಗೆ ಬಾರದ ಹಿನ್ನೆಲೆಯಲ್ಲಿ ತನ್ನ ದಾಖಲೆಯನ್ನು ತಾನೇ ಬ್ರೇಕ್ ಮಾಡಿ ಗುರಿ ಮುಟ್ಟಿದ ರಾಮ್ ಬಾಯಿ ಸ್ವರ್ಣ ಪದಕ ಪಡೆದುಕೊಂಡಿದ್ದಾರೆ.

ಅದೇ ದಿನ 200 ಮೀಟರ್ ಓಟದ ಸ್ಪರ್ಧೆಯಲ್ಲಿ 52.17 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದಿದ್ದಾರೆ.

100 ಮತ್ತು 200 ಮೀಟರ್ ಓಟದಲ್ಲಿ ಜಯಗಳಿಸಿದ ನಂತರ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ರಾಮ್ ಬಾಯಿ ಅವರಿಗೆ ಚಪ್ಪಾಳೆ ಅಭಿನಂದಿಸಿದರು.

ಬಳಿಕ ಅವರೊಂದಿಗೆ ಸೆಲ್ಫಿ, ಫೋಟೋ ತೆಗೆಸಿಕೊಂಡರು. ರಾಮ್ ಬಾಯಿ ಅವರ ಮೊಮ್ಮಗಳು, ಕ್ರೀಡಾಪಟು ಶರ್ಮಿಳಾ ಸಂಗ್ವಾನ್ ಈ ವೇಳೆ ಉಪಸ್ಥಿತರಿದ್ದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd