ಯುದ್ಧ ನೌಕೆ ರಣ್ ವಿಜಯನಲ್ಲಿ ಬೆಂಕಿ ಅವಘಡ – ನಾಲ್ವರಿಗೆ ಗಾಯ.
ಭಾರತೀಯ ಯುದ್ಧನೌಕೆ INS ರಣವಿಜಯನಲ್ಲಿ ಬೆಂಕಿ ಅಪಘಾತ ಸಂಭವಿಸಿದ್ದು ನೌಕ ಸೇನೆ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ನಾಲ್ವರು ನಾವಿಕರಿಗೆ ಗಾಯಗೊಂಡಿದ್ದು ನಿನ್ನೆ ಸಂಜೆ 5.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಅಫಘಾತಕ್ಕೆ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಗಾಯಗೊಂಡ ನಾವಿಕರನ್ನ ಹತ್ತಿರದ ನೌಕ ಸೇನೆಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಈ ಯುದ್ಧನೌಕೆ ಇತ್ತೀಚೆಗೆ ಸಮರಭ್ಯಾಸವನ್ನ ನಡೆಸಿ ವಿಶಾಖಪಟ್ಟಣದ ವಾಯುನೆಲೆಗೆ ಆಗಮಿಸುತ್ತಿತ್ತು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.








