ಜಮ್ಮು ಕಾಶ್ಮೀರಕ್ಕೆ ಬೇಟಿ ನೀಡಿದ ಅಮಿತ್ ಶಾ – ಭದ್ರತಾ ವ್ಯವಸ್ಥೆ ಪರಿಶೀಲನೆ.
ಆರ್ಟಿಕಲ್ 370 ರದ್ದಾದ ಬಳಿಕ ಮೊದಲ ಬಾರಿಗೆ ಜಮ್ಮು ಕಾಶ್ಮೀರಕ್ಕೆ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಇಂದು ಬೇಟಿ ನೀಡಿದರು.. ಶ್ರಿನಗರಕ್ಕೆ ಬಂದಿರುವ ಅವರು ಕೇಂದ್ರಾಡಳಿತ ಪ್ರದೇಶಗಳಾ ದ ಕಾಶ್ಮೀರ ಮತ್ತು ಲಡಖ್ ಗೆ ಬೇಟಿ ಕೊಟ್ಟು ಭ್ರಧ್ರತೆಯನ್ನ ಪರಿಶೀಲಿಸಲಿದ್ದಾರೆ.
ಇಂದಿನಿಂದ ಮೂರು ದಿನಗಳ ಕಾಲ ಪ್ರವಾಸವನ್ನ ಗೃಹಮಂತ್ರಿಗಳು ಮಾಡಲಿದ್ದಾರೆ. ಇತ್ತಿಚೀಗೆ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ದಾಳಿಗಳ ಕುರಿತಾಗಿ ಅಲ್ಲಿನ ಪಂಚಾಯತ್ ಸದಸ್ಯರು ಮತ್ತು ಬಿಜೆಪಿ ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದಾರೆ. ಮತ್ತು ಶ್ರೀನಗರದಿಂದ ಯುನೈಟೆಡ್ ಅರಬ್ ನ ಶಾರ್ಜ್ ಗೆ ಮೊದಲ ಅಂತರಾಷ್ಟ್ರೀಯ ವಿಮಾನಯಾನವನ್ನ ಅಧಿಕೃತವಾಗಿ ಅಮಿತ್ ಶಾ ಉದ್ಘಾಟಿಸಲಿದ್ದಾರೆ.
ಸದ್ಯ ಅಮಿತ್ ಶಾ ಆಗಮನದ ಹಿನ್ನಲೆಯಲ್ಲಿ ಕಾಶ್ಮೀರದ ಸುತ್ತಮುತ್ತ ಬಿಗಿ ಭದ್ರತೆಯನ್ನ ಹೆಚ್ಚಿಸಲಾಗಿದೆ… ಬಿಎಸ್ ಎಫ್, ಸಿ ಆರ್ ಪಿ ಎಫ್ ಮತ್ತು ಸ್ನೈಪರ್ ಪಡೆಗಳನ್ನ ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಕೆಲವೊಂದು ಕಡೆಗಳಲ್ಲಿ ಇಂಟರ್ನೆಟ್ ಸೇವೆ ವ್ಯತ್ಯಯವಾಗಲಿದೆ.
#WATCH Union Home Minister Amit Shah chairs security review meeting during his three-day visit to the Union Territory of Jammu and Kashmir pic.twitter.com/qtohyuXs2P
— ANI (@ANI) October 23, 2021