ಗಾಂಧಿನಗರ: ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದ ವಿದ್ಯಾರ್ಥಿನಿಯು ಮೆದುರಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.
ಗುಜರಾತ್‌ನ ಮೊರ್ಬಿಯಾದ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ (Brain Hemorrhage) ಸಾವನ್ನಪ್ಪಿದ್ದಾಳೆ. ಗುಜರಾತ್ (Gujrat) ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ ಬೋರ್ಡ್ (GSEB) ಫಲಿತಾಂಶದಲ್ಲಿ ಹೀರ್ ಘೆಟಿಯಾ ಎಂಬಾಕೆ 10 ನೇ ತರಗತಿ ಪರೀಕ್ಷೆಯಲ್ಲಿ ಶೇ. 99.70 ಅಂಕ ಗಳಿಸಿ ಟಾಪರ್ ಆಗಿದ್ದಳು.
ಆದರೆ, ಈಗ ವಿದ್ಯಾರ್ಥಿನಿಗೆ ಮೆದುಳಿನ ರಕ್ತಸ್ರಾವವಾಗಿದೆ. ಒಂದು ತಿಂಗಳ ಹಿಂದೆ ರಾಜ್‌ಕೋಟ್‌ನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಶಸ್ತ್ರಚಿಕಿತ್ಸೆಯ ನಂತರ ಡಿಸ್ಚಾರ್ಜ್ ಕೂಡ ಆಗಿ ಮನೆಗೆ ತೆರಳಿದ್ದಳು. ಆದರೆ ಮತ್ತೆ ವಿದ್ಯಾರ್ಥಿನಿಗೆ ಉಸಿರಾಟ ಮತ್ತು ಹೃದಯದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಎಂಆರ್‌ಐ ವರದಿಯಲ್ಲಿ ಶೇ. 90ರಷ್ಟು ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ತೋರಿಸಿದೆ. ಆನಂತರ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.
ಹೀರ್ ಟಾಪರ್ ಆಗುತ್ತಿದ್ದಂತೆ ವೈದ್ಯೆಯಾಗುವ ಕನಸು ಕಂಡಿದ್ದಳು. ಆದರೆ, ವಿಧಿ ನಿಯಮ ಬೇರೆಯೇ ಆಗಿದೆ.