ಪ್ರಪಾತಕ್ಕೆ ಬಿದ್ದ ಬಸ್ 13 ಜನ ಸಾವು, ಮೂವರ ರಕ್ಷಣೆ.

1 min read

ಪ್ರಪಾತಕ್ಕೆ ಬಿದ್ದ ಬಸ್ 13 ಜನ ಸಾವು, ಮೂವರ ರಕ್ಷಣೆ.

ಭಾನುವಾರ ಉತ್ತರಾಖಂಡದ ಚಕ್ರತಾದಲ್ಲಿ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದ ಯುಟಿಲಿಟಿ ವಾಹನವು ಕಂದಕಕ್ಕೆ ಬಿದ್ದ ಪರಿಣಾಮ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಸುದ್ದಿ ಹರಡಿದ ತಕ್ಷಣ ರಕ್ಷಣಾ ಕಾರ್ಯವನ್ನ ಪ್ರಾರಂಭಿಸಲಾಗಿದೆ.  ಎನ್ ಡಿ ಆರ್ ಎಫ್ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳ ಸಹಾಯದಿಂದ ರಕ್ಷಣಾ ಕಾರ್ಯಚರಣೆಯನ್ನ ನಡೆಸಲಾಗುತ್ತಿದೆ.

ಇದು ಅಂತ್ಯಂತ ದುರ್ಗಮ ಪ್ರದೇಶವಾಗಿದ್ದರಿಂದ ಮೃತ ದೇಹಗಳನ್ನ ಹೊರ ತೆಗೆಯುವ ಕಾರ್ಯ ವಿಳಂಬವಾಗುತ್ತಿದ್ದೆ  ರಸ್ತೆಯ ಪಕ್ಕದಲ್ಲಿ ಸುಮಾರು 300 ಅಡಿ ಆಳದಲ್ಲಿ ಬಿದ್ದಿದೆ ಎಂದು ಅಧಿಕಾರಿಗಳನ್ನ ತಿಳಿಸಿದರು. ಬೈಲಾ ಗ್ರಾಮದಿಂದ ವಿಕಾಸನಗರಕ್ಕೆ ಹೋಗುತ್ತಿದ್ದ ವೇಳೆ ವಾಹನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. 16 ಜನರು ಯುಟಿಲಿಟಿ ವಾಹನದಲ್ಲಿದ್ದರು. ಘಟನೆಯಲ್ಲಿ 13 ಜನರು ಸಾವನ್ನಪ್ಪಿದ್ದು, 3 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಕ್ರತಾ ರಸ್ತೆ ಅಪಘಾತದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಆದೇಶಿಸಿದ್ದಾರೆ. ವಾಹನಗಳಲ್ಲಿ ಓವರ್‌ಲೋಡ್ ಆಗದಂತೆ ನೋಡಿಕೊಳ್ಳಬೇಕು ಮತ್ತು ಇದೇ ರೀತಿಯ ಪ್ರಕರಣಗಳು ಕಂಡುಬಂದಾಗ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಗೆ ಸೂಚಿಸಿದರು. ಇಂತಹ ಘಟನೆಗಳು ಮರುಕಳಿಸದಂತೆ ವಾಹನಗಳ ಓವರ್‌ಲೋಡ್‌ಗೆ ಅವಕಾಶ ನೀಡದಂತೆ ರಾಜ್ಯದ ಜನತೆಗೆ ಮನವಿ ಮಾಡಿದರು.

ರಜನಿಕಾಂತ್ ಚೇತರಿಕೆ. ಆಸ್ಪತ್ರೆಗೆ ಬೇಟಿ ನೀಡಿದ ಮುಖ್ಯಮಂತ್ರಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd