ಕನ್ನಡದ ಬಗ್ಗೆ ಕವಿ ಪುಂಗವರ ಮಾತುಗಳು..

1 min read

 

ಕನ್ನಡದ ಬಗ್ಗೆ ಕವಿ ಪುಂಗವರ ಮಾತುಗಳು..

ಸುಲಿದ ಬಾಳೆಯ ಹಣ್ಣಿನಂದದಿ

ಕಳೆದ ಸಿಗುರಿನ ಕಬ್ಬಿನಂದದಿ

ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ

ಲಲಿತವಹ ಕನ್ನಡದ ನುಡಿಯಲಿ

ತಿಳಿದು ತನ್ನೊಳು ತನ್ನ ಮೋಕ್ಷವ

ಗಳಿಸಿಕೊಂಡೊಡೆ ಸಾಲದೇ ಸಂಸ್ಕೃತದೊಳಿನ್ನೇನು?

ಮಹಲಿಂಗರಂಗ

#ಕರ್ನಾಟಕ_ರಾಜ್ಯೋತ್ಸವ

——————————————

ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ |

ಕನ್ನಡದ ನೆಲದ ನೀರ್ವೊಲೆನಗೆ ಜೀವನದಿ

ಕನ್ನಡದ ನೆಲದ ಕಲ್ಲೆನಗೆ ಸಾಲಿಗ್ರಾಮ ಶಿಲೆ

ಕನಡವೆ ದೈವಮೈ ಕನ್ನಡ ಶಬ್ದಮೆನಗೋಂಕಾರಮೀಯೆನ್ನ |

ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ

ಮಿನ್ನಾವುದೈಪೆರೆತು ಕನ್ನಡದ

ಸೇವೆಯಿಂದಧಿಕಮೀಜಗಧೊಳೆನಗೆ?

ಸಾಲಿ ರಾಮಚಂದ್ರರಾವ್

#ಕರ್ನಾಟಕ_ರಾಜ್ಯೋತ್ಸವ

————————————————

ಕರ್ನಾಟವೆಂಬುದಿದು ಕಾಳಿ-ರಣಗಾಳಿಯಿದು, ಭೋಂಕಾರ

ರವವ ಕೇಳಿ!

ಮಡಿವ ರಣ ಹೇಡಿಗಳ ಹೃದಯದಲಿ ತುಂಬುವಳು

ಕಡದಾದ ವೀರ್ಯ ಕಾಳಿ

ಶ್ರೀಧರ ಖಾನೋಳ್ಕರ್

#ಕರ್ನಾಟಕ_ರಾಜ್ಯೋತ್ಸವ

66ನೇ ಕನ್ನಡ ರಾಜ್ಯೋತ್ಸವ | ಸಿಎಂ ಬೊಮ್ಮಾಯಿ, ಬಿಎಸ್ ವೈ ಶುಭಾಶಯ

66ನೇ ಕನ್ನಡ ರಾಜ್ಯೋತ್ಸವ | ಕನ್ನಡದಲ್ಲಿ ವಿಶ್ ಮಾಡಿದ ಮೋದಿ, ಶಾ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd