ಹತ್ತು ಸಾವಿರ ಹೆರಿಗೆ ಮಾಡಿಸಿರುವ ಸೂಲಗಿತ್ತಿಗೆ ರಾಜ್ಯೋತ್ಸವ ಪ್ರಶಸ್ತಿ.
66 ನೇ ಕನ್ನಡ ರಾಜ್ಯೊತ್ಸವದ ಪ್ರಯುಕ್ತ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸರ್ಕಾರ ಗೌರವಿಸಿದೆ.
ದಾವಣೆಗೆರೆ ಜಿಲ್ಲೆ ಜಗಳೂರು ತಾಲೋಕಿನ ಸೂಲಗಿತ್ತಿ ಹಾಗು ನಾಟಿ ವೈದೈ ಸುಲ್ತಾನಿಬಿ (75) ಅವರಿಗೆ ಈ ಭಾರಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ಜಗಳೂರು ತಾಲೋಕಿನ ಜನತೆಯ ಹರ್ಷಕ್ಕೆ ಕಾರಣವಾಗಿದೆ. ತಾಲೋಕಿನ ಗೊಲ್ಲರಹಟ್ಟಿ ಗ್ರಾಮದ ಸುಲ್ತಾನಿಬಿ ಅವರು ಚರ್ಮರೋಗ ಇಸುಬು ಹುಳುಕಡ್ಡಿ ಗೆ ನಾಟಿ ಚಿಕಿತ್ಸೆಯಲ್ಲಿ ಸಿದ್ಧಹಸ್ತರು.
10 ಸಾವಿರಕ್ಕೂ ಹೆಚ್ಚು ಹೆರಿಗೆ : ಗ್ರಾಮೀಣ ಪ್ರದೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಇವರಿಗೆ ‘ಆರೋಗ್ಯ ಇಲಾಖೆಯಿಂದ ಹೆರಿಗೆ ಕಿಟ್ ನೀಡಲಾಗಿದೆ’ ಇವರು ತಮ್ಮ ಬಳಿ ಬಂದಿದ್ದೆ ಎಲ್ಲಾ ಹೆರಿಗೆಗಳನ್ನ ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಥಹ ಗ್ರಾಮೀಣ ಪ್ರತಿಭೆಯನ್ನ ಗುರುತಿಸಿ ಪ್ರಶಸ್ತಿ ನೀಡಿರುವುದು ಶ್ಲಾಘನೀಯ.
ಸುಮಾರು 75 ವರ್ಷದ ಇಳಿವಯಸ್ಸಿನಲ್ಲಿಯೂ ಮುರುಕಲು ಹಂಚಿನ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಜಗಳೂರು ಶಾಸಕ ಎಸ್ ವಿ ರಾಮಚಂದ್ರ ಅವರು ಶುಭಾಶಯಗಳನ್ನ ಕೋರಿ ಅಭಿನಂದನೆ ತಿಳಿಸಿದ್ದಾರೆ..