ಮದುವೆಯಾದ ಮೂರೆ ದಿನಕ್ಕೆ ಮಸಣ ಸೇರಿದ ದಂಪತಿಗಳು

1 min read

ಮದುವೆಯಾದ ಮೂರೆ ದಿನಕ್ಕೆ ಮಸಣ ಸೇರಿದ ದಂಪತಿಗಳು

ಕೆಲವೇ ದಿನಗಳ ಹಿಂದೆಯಷ್ಟೆ ಮದುವೆಯಾಗಿದ್ದ ನವ ದಂಪತಿಗಳಬ್ಬರು ಬೀಕರವಾಗಿ ರಸ್ತೆ ಅಫಘಾತದಲ್ಲಿ  ಮೃತ ಪಟ್ಟಿದ್ದಾರೆ. ಅರೊಕ್ಕೋಣಂ ಪ್ರದೇಶದ 31 ವರ್ಷದ  ಮನೋಜ್ ಕುಮಾರ್ ಎನ್ನುವ ಯುವಕ  ಚೆನೈ ಪೆರುಂಬಕ್ಕಂ ನ30 ವರ್ಷದ ಕಾರ್ತೀಕಾ ಯುವತಿ ಕೇವಲ ಮೂರು ದಿನಗಳ ಹಿಂದೆಯಷ್ಟೆ ಮದುವೆಯಾಗಿದ್ದರು.

ಚೆನ್ನೈನಿಂದ ಮನೆಗೆ ಕಾರಿನಲ್ಲಿ ತೆರಳುತ್ತಿರುವಾಗ ಸಿಮೆಂಟ್ ಟ್ರಕ್ ನ ಮೂಲಕ ಬಂದ ಜವರಾಯ ಇವರ ಪ್ರಾಣಾಘಾತಕ್ಕೆ ಕಾರಣವಾಗಿದ್ದಾನೆ.

ಮಪ್ಪೆಡು ಬಳಿಯ ಪೆರುಂಬಕ್ಕಂ-ಅರಕ್ಕೋಣಂ ರಸ್ತೆಯಲ್ಲಿ ಮನೆಗೆ ತೆರಳುವಾಗ ಸಿಮೆಂಟ್ ಟ್ರಕ್  ನವದಂಪತಿಗಳು  ಹೋಗುತ್ತಿದ ಕಾರಿನ ಮೇಲೆ ಮುಗುಚಿ ಬಿದ್ದಿದ್ದು ದಂಪತಿಗಳೂ ಸೇರಿದಂತೆ ಕಾರು ಸಂಪೂರ್ಣವಾಗಿ ನಜ್ಜು ಗುಜ್ಜಾಗಿದೆ. ಘಟನೆಯ ನಂತರ ಟ್ರಕ್ ಚಾಲಕ ಪರಾರಿಯಾಗಿದ್ದಾನೆ.

ದಂಪತಿಗಳನ್ನ ಹೊರತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದು 1 ಕಿಮೀ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಪ್ಪೆಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಅಪ್ಪುಗೆ ಭಾವಪೂರ್ವ ಶ್ರದ್ಧಾಂಜಲಿ

ಡಿಕೆಶಿಯ ಮ್ಯೂಸಿಕಲ್ ಚೇರ್ ಹೇಳಿಕೆಗೆ ಬಿಜೆಪಿ ವ್ಯಂಗ್ಯ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd