ಒಂದು ಸೂರ್ಯ ಒಂದು ಜಗತ್ತು ಒಂದು ಗ್ರಿಡ್ ಗೆ ಮೋದಿ ಕರೆ.

1 min read
PM Modi

ಒಂದು ಸೂರ್ಯ ಒಂದು ಜಗತ್ತು ಒಂದು ಗ್ರಿಡ್ ಗೆ ಮೋದಿ ಕರೆ.

ಸೌರಶಕ್ತಿಯ ಕಾರ್ಯಸಾಧ್ಯತೆಯನ್ನು ಸುಧಾರಿಸಲು ‘ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್’ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕರೆ ನೀಡಿದರು

ಹವಾಮಾನ ವೈಪರಿತ್ಯಕ್ಕೆ ಸಂಬಂದಿಸಿದ ವಿಶ್ವ ನಾಯಕರ ಸಭೆಯಲ್ಲಿ  ‘ಕ್ಲೀನ್ ಟೆಕ್ನಾಲಜಿ ಆವಿಷ್ಕಾರ’ ಕಾರ್ಯಕ್ರಮದಲ್ಲಿ ವಿಶ್ವ ನಾಯಕರನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಪಳೆಯುಳಿಕೆ ಇಂಧನ ಶಕ್ತಿಯಿಂದ ಅನೇಕ ರಾಷ್ಟ್ರಗಳು ಶ್ರೀಮಂತರಾಗಲು ಕಾರಣವಾಯಿತು. ಆದರೆ ಇದು ಭೂಮಿ ಮತ್ತು ಪರಿಸರವನ್ನು ನಾಶಮಾಡಿದೆ ಎಂದು ಹೇಳಿದರು.

“ಕೈಗಾರಿಕಾ ಕ್ರಾಂತಿಯು ಪಳೆಯುಳಿಕೆ ಇಂಧನಗಳಿಂದ ನಡೆಸಲ್ಪಟ್ಟಿತು. ಪಳೆಯುಳಿಕೆ ಇಂಧನಗಳ ಬಳಕೆಯಿಂದ ಹಲವಾರು ದೇಶಗಳು ಸಮೃದ್ಧವಾಗಿವೆ ಆದರೆ ಇದು ನಮ್ಮ ಭೂಮಿ ಮತ್ತು ಪರಿಸರವನ್ನು ಬಡವಾಗಿಸಿದೆ. ಇಂದು ತಂತ್ರಜ್ಞಾನ ನಮಗೆ ಉತ್ತಮ ಪರ್ಯಾಯ ಶಕ್ತಿಯನ್ನ  ಒದಗಿಸಿದೆ,” ಎಂದು ಹೇಳಿದರು.

ತಮ್ಮ ಭಾಷಣದಲ್ಲಿ ‘ಸೂರ್ಯೋಪನಿಷದ್’ ಶ್ಲೋಕವನ್ನ  ಉಲ್ಲೇಖಿಸಿದ ಮೋದಿ, ಎಲ್ಲವೂ ಸೂರ್ಯನಿಂದ ಹುಟ್ಟಿದೆ, ಸೂರ್ಯನು ಶಕ್ತಿಯ ಏಕೈಕ ಮೂಲವಾಗಿದೆ ಮತ್ತು ಸೌರ ಶಕ್ತಿಯು ಪ್ರತಿಯೊಬ್ಬರನ್ನು ಕಾಯುತ್ತದೆ ಎಂದು ಹೇಳಿದರು.‘ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್’ಗೆ ಕರೆ ನೀಡಿದ ಮೋದಿ, ಹಗಲಿನಲ್ಲಿ ಮಾತ್ರ ಲಭ್ಯವಾಗುವ ಸೌರಶಕ್ತಿಯ ಸವಾಲನ್ನು ಎದುರಿಸಲು ಇದು ಪರಿಹಾರವಾಗಿದೆ ಎಂದು ಹೇಳಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶೀಘ್ರದಲ್ಲೇ ಭೂಮಿಯ ಮೇಲಿನ ಯಾವುದೇ ಸ್ಥಳದ ಸೌರಶಕ್ತಿ ಸಾಮರ್ಥ್ಯವನ್ನು ಲೆಕ್ಕಾಚಾರ ಮಾಡಲು ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಿದೆ ಎಂದು ಅವರು ಘೋಷಿಸಿದರು.

ಈ ಸಭೆಯ ನಂತರ ಅಲ್ಲಿನ ಭಾರತೀಯರನ್ನ ಬೇಟಿಯಾಗಿ ಕೈಕುಲುಕಿ ಸಂತಸ ಹಂಚಿಕೊಂಡರು ನಂತರ ಶುಭಾಶಯಗಳನ್ನ ತಿಳಿಸಿ ಭಾರತಕ್ಕೆ ವಾಪಸ್ ಆದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd