ಹಸುವಿನ ಸಗಣಿ, ಮೂತ್ರದಿಂದ ಆರ್ಥಿಕ ಅಭಿವೃಧ್ಧಿಯೂ ಸಾಧ್ಯ- ಶಿವರಾಜ್ ಸಿಂಗ್ ಚೌಹಾಣ್
ಹಸುವಿನ ಸಗಣಿಯಿಂದ ಮತ್ತು ಮೂತ್ರದಿಂದ ಒಬ್ಬ ವ್ಯಕ್ತಿಯ ಜೊತೆಗೆ ದೇಶದ ಆರ್ಥಿಕ ಅಭಿವೃದ್ದಿಯೂ ಸಾಧ್ಯ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಹಸುಗಳ ಸಗಣಿ, ಮೂತ್ರದಿಂದ ನಾವು ನಮ್ಮ ಸ್ವಂತ ಆರ್ಥಿಕತೆ ಸದೃಢಗೊಳಿಸಿಕೊಳ್ಳುವ ಜತೆ, ದೇಶದ ಆರ್ಥಿಕತೆಯನ್ನೂ ಪ್ರಬಲಗೊಳಿಸಬಹುದು. ಸರ್ಕಾರಗಳು ಹಸು ಸಂರಕ್ಷಿತ ಪ್ರದೇಶಗಳು ಮತ್ತು ಗೋಶಾಲೆಗಳನ್ನು ಅಭಿವೃದ್ಧಿಪಡಿಸಬಹುದು. ಆದರೆ ಕೇವಲ ಸರ್ಕಾರವೊಂದೇ ಅದನ್ನು ನಡೆಸಲು ಸಾಧ್ಯವಿಲ್ಲ ಜನರ ಬೆಂಬಲವೂ ಬೇಕಾಗುತ್ತದೆ ಎಂದು ಭಾರತೀಯ ಪಶುವೈದ್ಯಕೀಯ ಸಂಘ ಏರ್ಪಡಿಸಿದ್ದ ಮಹಿಳಾ ಪಶುವೈದ್ಯರ ಸಮಾವೇಶದಲ್ಲಿ ಮಾತನಾಡಿದರು.
ಸಣ್ಣ ರೈತರು ಮತ್ತು ಜಾನುವಾರು ಮಾಲೀಕರಿಗೆ ಹಸುಗಳ ಸಾಕಣೆ ಹೇಗೆಲ್ಲ ಲಾಭದಾಯಕವಾಗಬಹುದು ಎಂಬ ಬಗ್ಗೆ ತಜ್ಞರು, ಪಶುವೈದ್ಯರು ಹೆಚ್ಚೆಚ್ಚು ಸಂಶೋಧನೆಯಲ್ಲಿ ತೊಡಗಬೇಕು ಶಿವರಾಜ್ ಸಿಂಗ್ ಚೌಹಾಣ್ ಸಲಹೆ ನೀಡಿದರು. ಮಧ್ಯಪ್ರದೇಶದಲ್ಲಿ ಸ್ಮಶಾನದಲ್ಲಿ ಹೆಣಗಳನ್ನ ಸುಡಲು ಮರದ ಕಟ್ಟಿಗೆಗೆ ಬದಲಾಗಿ ಸಗಣಿಯಿಂದ ಮಾಡಿದ ಕುರುಳುಗಳನ್ನ ಬಳಸಲಾಗುತ್ತಿದೆ ಎಂದರು
https://twitter.com/i/status/1459539699794468874








