ಜೈಲಿನಲ್ಲಿ ಖೈದಿಗಳ ನಡುವೆ ಮಾರಾಮಾರಿ – 68 ಮಂದಿ ಸಾವು.

1 min read

ಜೈಲಿನಲ್ಲಿ ಖೈದಿಗಳ ನಡುವೆ ಮಾರಾಮಾರಿ – 68 ಮಂದಿ ಸಾವು.

ಕ್ವಿಟೋ ದೇಶದ ಈಕ್ವೆಡಾರ್‌ ನಗರದ ಜೈಲಿನಲ್ಲಿ ಖೈದಿಗಳ ನಡುವೆ ಭಾರಿ ಮಾರಾಮಾರಿ ನಡೆದಿದೆ. ಗಲಭೆಯಲ್ಲಿ ಕನಿಷ್ಠ 68 ಕೈದಿಗಳು ಸಾವನ್ನಪ್ಪಿದ್ದಾರೆ, ಇದು ದೇಶ ಕಂಡ ಅತಿ ದೊಡ್ಡ ಜೈಲು ದುರಂತ ಎಂದು ಆಧಿಕಾರಿಗಳು ಹೇಳಿದ್ದಾರೆ. ಈ ಹಿಂದೆಯು ಇದೇ ರೀತ ಗಲಭೆ ನಡೆದಿತ್ತು. ಹಿಂದಿನ ಗಲಭೆಯ ನಂತರ ಸರ್ಕಾರವು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರೂ ಮತ್ತು ಶಾಂತತೆಯನ್ನು ಪುನಃಸ್ಥಾಪಿಸಲು ಸದ್ಯವಾಗಿಲ್ಲ.  ಭಾರಿ ಶಸ್ತ್ರಸಜ್ಜಿತ ಪೊಲೀಸ್ ಅಧಿಕಾರಿಗಳನ್ನು ಜೈಲುಗಳಿಗೆ ಕಳುಹಿಸಿ ಪರಿಸ್ಥಿತಿಯನ್ನ ನಿಯಂತ್ರಣಕ್ಕೆ  ತರಲಾಗಿದೆ.

ಮಾದಕವಸ್ತು ಕಳ್ಳಸಾಗಣೆ ಮಾರ್ಗಗಳ ಹಿಡಿತ ಸಾಧಿಸಲು ಪ್ರತಿಸ್ಪರ್ಧಿ ಗ್ಯಾಂಗ್‌ಗಳ ನಡುವಿನ ಗಲಭೆಯಲ್ಲಿ ಸತತ ಹತ್ಯೆಗಳು ನಡೆದಿವೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಕನಿಷ್ಠವೆಂದರೂ 1 ಗಂಟೆಗಳ ಕಾಲ ಜೈಲಿನ್ನಲ್ಲಿ ಗನ್ ಫೈರಿಂಗ್  ನಡೆದಿದೆ ಎಂದು ಜೈಲಿನಲ್ಲಿದ್ದವರು ಹೇಳಿದ್ದಾರೆ.

ಕಾರಗೃಹದಲ್ಲಿ ಸುಟ್ಟು ಬಿದ್ದಿರುವ ಶವದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸೆಪ್ಟಂಬರ್  ತಿಂಗಳಲ್ಲಿ  ಲಿಟರೋಲ್  ಜೈಲಿನಲ್ಲಿ ಹಿಂಸಾತ್ಮಕ ಘಟನೆ ನಡೆದಿತ್ತು. ಆಗ 118 ಮಂದಿ ಸಾವನ್ನಪ್ಪಿದ್ದರು.

ಈ ಘಟನೆಯ ನಂತರ ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಆದರೂ ಗುವಾಕ್ವಿಲ್‌ನಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd