11 ವರ್ಷದ ಬಾಲಕನ ಕತ್ತು ಕುಯ್ದು ಅತ್ಯಾಚಾರ ಮಾಡಿದ ಪಾಕ್ ಪಾಪಿಗಳು
11 ವರ್ಷದ ಹಿಂದೂ ಭಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿ ಆನಂತರ ಆತ್ಯಾಚಾರ ಮಾಡಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾತ್ಯದಲ್ಲಿ ನಡೆದಿದೆ.
ಬಾಲಕನ ಪೋಷಕರು ಗುರು ನಾನಕ್ ಜಯಂತಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಮಗುವಿನ ಕಡೆ ಗಮನ ಕೊಟ್ಟಿರಲಿಲ್ಲ. ಸಮಯದಲ್ಲಿ ಬಾಲಕನನ್ನ ಕರೆದುಕೊಂಡು ಹೊದ ಕಾಮುಕರು ಬಲತ್ಕಾರ ಮಾಡಿದ್ದಾರೆ. ಬಾಲಕನ ಶವ ಬಾಬರ್ಲೋಯ್ ಪಟ್ಟಣದಲ್ಲಿನ ಹಾಳುಬಿದ್ದ ಮನೆಯೊಂದರಲ್ಲಿ ಪತ್ತೆಯಾಗಿದೆ ಎಂದು ಕುಟುಂಬ ಹೇಳಿಕೆಯಲ್ಲಿ ತಿಳಿಸಿವೆ .
ಅಪ್ರಾಪ್ತ ಬಾಲಕನ ದೇಹದ ಮೇಲೆ ಚಿತ್ರಹಿಂಸೆ ನೀಡಿರುವ ಗುರುತು ಕಂಡುಬಂದಿವೆ. ಆರೋಪಿಗಳು ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಮುನ್ನ ಕತ್ತು ಕೊಯ್ದು ಹತ್ಯೆ ಮಾಡಿದ್ದಾರೆ ಎಂದು ಬಾಬರ್ಲೋಯ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ಗಳು ಪತ್ರಿಕೆಗಳಿಗೆ ತಿಳಿಸಿದ್ದಾರೆ.
ಈ ಪ್ರಾಂತ್ಯದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆಯುತ್ತಿರುವ ಎರಡನೇ ಘೋರ ಪ್ರಕರಣ ಎಂದು ಪಾಕಿಸ್ತಾನದ ಮಕ್ಕಳ ರಕ್ಷಣಾ ಪ್ರಾಧಿಕಾರ ಜುಬೇರ್ ಮಹೇರ್ ಹೇಳಿದ್ದಾರೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಈ ಪೈಕಿ ಒಬ್ಬ ತಪ್ಪೊಪ್ಪಿಕೊಂಡಿದ್ದಾನೆ.