SSLC ವಿದ್ಯಾರ್ಥಿಗಳಿಗೆ ಶುಭ ಸುದ್ದಿ 20 % ಪಠ್ಯ ಕಡಿತ ಸಂಭವ
ಕೊರೊನಾ ಕಾರಣದಿಂದಾಗಿ ಈ ವರ್ಷವು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮವನ್ನ ಪೂರೈಸಲಾಗಿಲ್ಲ. ಸಮಯದ ಅಭಾವದಿಂದ ಶಿಕ್ಷಕರಿಗೆ ಸಾಕಷ್ಟು ಸಮಸ್ಯೆಗಳುಂಟಾಗುತ್ತಿವೆ. ಕಡಿಮೆ ಅವಧಿಯ ಹಿನ್ನೆಲೆಯಲ್ಲಿ ಶಿಕ್ಷಕರು ಬೇಗ ಬೇಗ ಪಠ್ಯಕ್ರಮ ಮುಗಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಇದರಿಂದ ಮಕ್ಕಳು ಪಾಠ ಪ್ರವಚನಗಳು ಸರಿಯಾಗಿ ಅರ್ಥವಾಗದೆ ತೊಂದರೆಗೆ ಒಳಗಾಗುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ರವರು ವಿದ್ಯಾರ್ಥಿಗಳಿಗೆ ಶುಭ ಸುದ್ಧಿಯೊದನ್ನ ನೀಡುವ ಸಾಧ್ಯಯತೆ ಇದೆ. ಶೇಕಡ.20 ರಷ್ಟು ಪಠ್ಯವನ್ನು ಕಡಿತಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಇಬ್ಬರಿಗೂ ಒತ್ತಡ ಕಡಿಮೆ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಹಂತದಲ್ಲಿ ತಿಳಿಯಬೇಕಾದ ಪ್ರಾಮುಖ್ಯತೆಯ ವಿಷಯಗಳನ್ನು ಆಧರಿಸಿ, ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಬಿ ಸಿ ನಾಗೇಶ್ ಪಠ್ಯಕ್ರಮ ಕಡಿತಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಸಂಜೆ ವೇಳೆಗೆ ಎಸ್ಎಸ್ಎಲ್ಸಿ ದಲ್ಲಿ ಶೇಕಡ 20 ರಷ್ಟು ಕುರಿತು ಅಧಿಕೃತ ಆದೇಶ ನೀಡುವ ಅವಕಾಶ ಇದೆ.








