ಹೆದ್ದಾರಿ ಅಪಘಾತಕ್ಕೆ ಶಾಸಕರ ಅಳಿಯ ಸೇರಿ ನಾಲ್ವರ ಸಾವು
ವಿಜಯಪುರ ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಸರ್ಕಾರಿ ಬಸ್ ಮತ್ತು ಫಾರ್ಚೂನರ್ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮದಿಂದಾಗಿ ಕಾರಿನಲ್ಲಿಂದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ವಿಜಯಪುರದ ನಾಗಠಾಣ ಶಾಸವ ದೇವಾನಂದ ಚವ್ಹಾಣ್ ಅವರ ಅಕ್ಕನ ಮಗ ವಿಜಯ್ ದೊಡ್ಡಮನಿ ಮತ್ತು ಅವರ ಸ್ನೇಹಿತರಾದ ಚಿದಾನಂದ ನಾಗೇಶ ಸೂರ್ಯವಂಶಿ, ಸೋಮನಾಥ ಕಾಳೆ, ಹಾಗು ಸಂದೀಪ್ ಪವಾರ್ ಎಂದು ಗುರುತಿಸಲಾಗಿದೆ. ಮೃತಪಟ್ಟವರು ಮಹರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ನಾಂದೇಡ ಮೂಲದವರಾಗಿದ್ದಾರೆ.
ನಿಶ್ಚಿತಾರ್ಥಕ್ಕಾಗಿ ಗುತ್ತಿಗೆ ಪಡೆದಿದ್ದ ಕೆಎ 22 ಎಫ್ 2198 ಸರ್ಕಾರಿ ಬಸ್ ಮತ್ತು ಎಂ ಎಚ್ 13 ಸಿ ಎಸ್ 3330 ಸಂಖ್ಯೆಯ ಕಾರು ಮುಖಾಮುಖಿ ಡಿಕ್ಕಿಯಾಗಿವೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಜುಮುನಾಳ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ. ಫಾರ್ಚೂನರ್ ಕಾರಿನ ಅತೀವೇಗ ಹಾಗೂ ಚಾಲನ ಅಜಾಗರೂಕತೆ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.








