ಡಾಲರ್ ಶೇಷಾದ್ರಿ ಖ್ಯಾತಿಯ ತಿರುಪತಿ ತಿರುಮಲದ ಮುಖ್ಯಸ್ಥರು ಇನ್ನಿಲ್ಲ
ತಿರುಮಲದ ವೆಂಕಟೇಶ್ವರ ದೇವಸ್ಥಾನದ OSD(ಪ್ರಧಾನ ಅರ್ಚಕರಾಗಿ ) ಕಾರ್ಯನಿರ್ವಹಿಸುತ್ತಿದ್ದ ಡಾಲರ್ ಶೇಷಾದ್ರಿ ಅವರು ಇನ್ನಿಲ್ಲ. ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶಾಖಪಟ್ಟಣಕ್ಕೆ ತೆರಳಿದ್ದರು. ವಿಶಾಖಪಟ್ಟಣದಲ್ಲಿ ಮುಂಜಾನೆ ಹೃದಯಾಘಾತಕ್ಕೆ ಒಳಗಾಗಿದ್ದರು ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೆ ಕೊನೆಯುಸಿರೆಳೆದರು.
1978 ರಿಂದಲೂ ಡಾಲರ್ ಶೇಷಾದ್ರಿ ಅವರು ದೇವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 2007 ರಲ್ಲಿ ನಿವೃತ್ತರಾಗಿದ್ದರು. ಅವರ ಸೇವೆಯನ್ನ ಗುರುತಿಸಿ ಟಿಟಿಡಿ ( ತಿರುಪತಿ ತಿರುಮಲ ಟ್ರಸ್ಟ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಲೆ ಅವರು ಕೊನೆಯುಸಿರೆಳೆದಿದ್ದಾರೆ. ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಹಲವಾರು ಕಡೆಗಳಿಂದ ಗಣ್ಯರು ಡಾಲರ್ ಶೇಷಾದರಿಯವರ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಹೆದ್ದಾರಿ ಅಪಘಾತಕ್ಕೆ ಶಾಸಕರ ಅಳಿಯ ಸೇರಿ ನಾಲ್ವರ ಸಾವು
ಹೊಸ ವೈರಾಣು ಕುರಿತು ಅನಗತ್ಯ ಆತಂಕಬೇಡ : ಸುಧಾಕರ್








