ಮಗನಿಂದ ಆಸ್ತಿಗಾಗಿ ಕಿರುಕುಳ, ಸರ್ಕಾರಕ್ಕೆ ಆಸ್ತಿ ಬರೆದುಕೊಟ್ಟ ತಂದೆ
ಮಗ ಆಸ್ತಿಗಾಗಿ ತೊಂದರೆ ನೀಡುತ್ತಿದ್ದಾರೆ ಎಂದು ವಯಸ್ಸಾದ ತಂದೆಯೊಬ್ಬರ ತನ್ನ 2.5 ಕೋಟಿ ರುಪಾಯಿ ಮೂಲದ ಆಸ್ತಿಯನ್ನ ರಾಜ್ಯ ಸರ್ಕಾರಕ್ಕೆ ಬರೆದು ಕೊಟ್ಟು ಸುದ್ದಿಯಾಗಿದ್ದಾರೆ. ಆಗ್ರ ಮೂಲದ 83 ವರ್ಷದ ಗಣೇಶ್ ಶಂಕರ್ ಪಾಂಡೆ ತಂಬಾಕು ವ್ಯಾಪಾರ ಮಾಡುವನ್ನ ಮಾಡುತ್ತಿದ್ದಾರೆ.
ತನ್ನ ಹಿರಿಯ ಮಗ ತನ್ನ ಆಸ್ತಿಗೆ ಉತ್ತರಾಧಿಕಾರಿಯಾಗಲು ತೊಂದರೆ ಕೊಡುತ್ತಿದ್ದಾನೆ ಎಂದು ಉಲ್ಲೇಖಿಸಿ ಪತ್ರ ಬರೆದು ಜಿಲ್ಲೆಯ ಸಿಟಿ ಮ್ಯಾಜಿಸ್ಟ್ರೇಟ್ ಪ್ರತಿಪಾಲ್ ಸಿಂಗ್ ಅವರಿಗೆ ತಮ್ಮ ಸ್ಥಿರಾಸ್ತಿಯನ್ನ ಬರೆದುಕೊಟ್ಟಿದ್ದಾರೆ. ಗಣೇಶ್ ಶಂಕರ್ ಅವರಿಗೆ ದಿಗ್ವಿಜಯ್ ಸಿಂಗ ಎನ್ನುವ ಪುತ್ರನಿದ್ದಾನೆ,
” ನನ್ನ ಮಗ, ಹೆಂಡತಿ ಮತ್ತು ಇಬ್ಬರ ಮಕ್ಕಳ ಜೊತೆ ವಾಸಿಸುತ್ತಿದ್ದಾನೆ. ನನಗೆ ಗೌರವ ಕೊಡುವುದಿಲ್ಲ ಆಗಾಗ್ಗೆ ನನ್ನ ಜೊತೆ ಅನುಚಿತವಾಗಿ ವರ್ತಿಸುತ್ತಾನೆ. ನನ್ನ ಆಸ್ತಿಯನ್ನ ಕಬಳಿಸಲು ಪ್ರಯತ್ನಿಸುತ್ತಿದಾನೆ. ಇದರಿಂದ ಬೇಸತ್ತು ನಾನು ನನ್ನ ಆಸ್ತಿಯನ್ನ ಸರ್ಕಾರಕ್ಕೆ ವರ್ಗಾವಣೆ ಮಾಡಲು ನಿರ್ಧರಿಸಿದೆ” ಎಂದು ಗಣೇಶ್ ಶಂಕರ್ ಪಾಂಡೆ ಹೇಳಿದ್ದಾರೆ.








