ಹೊಸದಿಲ್ಲಿ : ದೇಶದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಹಲವರು ಮುಂದೆ ಬಂದು ಹಣ ಸಹಾಯ ಮಾಡುತ್ತಿದ್ದಾರೆ. ಇದೀಗ ಕೊರೊನಾ ಸೋಂಕಿನಿಂದ ಎದುರಾಗಿರುವ ಸಮಸ್ಯೆಗಳನ್ನು ನಿಭಾಯಿಸಲು ಅಝೀಂ ಪ್ರೇಮ್ ಜಿ ಫೌಂಡೇಶನ್, ವಿಪ್ರೋ ಲಿಮಿಟೆಡ್ ಹಾಗೂ ವಿಪ್ರೋ ಎಂಟರ್ ಪ್ರೈಸಸ್ 1,125 ಕೋಟಿ ರೂ. ನೀಡುವುದಾಗಿ ತಿಳಿಸಿವೆ.
ಈ ಕುರಿತಂತೆ ಅಝೀಂ ಪ್ರೇಮ್ ಜಿ ಫೌಂಡೇಶನ್ ಹಾಗೂ ವಿಪ್ರೋ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿವೆ. ಕೊರೊನಾದಿಂದಾಗಿ ದೇಶ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟನ್ನು ನಿಭಾಯಿಸಲು 1,125 ಕೋಟಿ ರೂ.ನೀಡುತ್ತಿರುವುದಾಗಿ ಹೇಳಿವೆ. ಈ ಮೊತ್ತವು ಕೋವಿಡ್-19 ವಿರುದ್ಧ ಸೆಣಸಾಡುತ್ತಿರುವ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗಳಿಗೆ ಸಹಾಯಕವಾಗಲಿವೆ ಎಂದೂ ಸಂಸ್ಥೆ ತಿಳಿಸಿದೆ.
ಇನ್ನು ಒಟ್ಟು ದೇಣಿಗೆ ಮೊತ್ತದ ಪೈಕಿ ವಿಪ್ರೋ ಲಿಮಿಟೆಡ್ ಪಾಲು 100 ಕೋಟಿ ರೂ. ಆಗಿದ್ದರೆ ವಿಪ್ರೋ ಎಂಟ ಪ್ರೈಸಸ್ ರೂ 25 ಕೋಟಿ ನೀಡುವುದಾಗಿ ತಿಳಿಸಿದೆ. 1,000 ಕೋಟಿ ರೂ. ನೆರವನ್ನು ಅಝೀಂ ಪ್ರೇಮ್ ಜಿ ಫೌಂಡೇಶನ್ ಒದಗಿಸಲಿದೆ.