ನರ್ಸಿಂಗ್ ಕಾಲೇಜಿನ 24 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟೀವ್
ಶಿವಮೊಗ್ಗ – ಭದ್ರಾವತಿ ತಾಲೂಕಿನ ನಿರ್ಮಲಾ ನರ್ಸಿಂಗ್ ಕಾಲೇಜಿನಲ್ಲಿ ಒಂದೇ ದಿನ 24 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟೀವ್ ಪತ್ತೆಯಾಗಿದೆ. ಕರೋನ ಸೋಂಕು ದೃಢಪಡುತ್ತಿದ್ದಂತೆ ಕಾಲೇಜನ್ನ ಸೀಲ್ ಡೌನ್ ಮಾಡಲಾಗಿದೆ.
ನಿರ್ಮಲಾ ನರ್ಸಿಂಗ್ ಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಶಿವಮೊಗ್ಗಕ್ಕೆ ಬಂದಿದ್ದರು ಎನ್ನಲಾಗಿದೆ. ಪರೀಕ್ಷೆ ಮುಗಿಸಿ ವಾಪಸ್ ಹೋದವರಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ತಪಾಸಣೆ ನಡೆಸಿದಾಗ ವಿದ್ಯಾರ್ಥಿಗಳಲ್ಲಿ ಕೋವಿಡ್ ದೃಢಪಟ್ಟಿದೆ.
ನರ್ಸಿಂಗ್ ಹೋಂ ಜೊತೆಗೇ ಕಾಲೇಜು ಇರುವುದರಿಂದ ನರ್ಸಿಂಗ್ ಹೋಂ ಅನ್ನು ಸಹ ಸೀಲ್ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಹೀಗಾಗಿ ಇಂದು ನರ್ಸಿಂಗ್ ಹೋಂನಲ್ಲಿ ಒಪಿಡಿ ಸೇವೆ ಬಂದ್ ಮಾಡಲಾಗಿದೆ.
ಸದ್ಯ ಕಾಲೇಜಿನ ಎಲ್ಲಾ ವಿದ್ಯಾರ್ಥಿ ಸಿಬ್ಬಂದಿಗಳನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಲಾಗಿದೆ ವರದಿ ಬಂದ ನಂತರ ಪ್ರಕರಣಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ.