ವಿಧಾನ ಪರಿಷತ್ ಗೋಮುಖ ವ್ಯಾಘ್ರಗಳ ತಾಣವಾಗುತ್ತಿದೆ – ಕುರುಬೂರು ಶಾಂತ್ ಕುಮಾರ್…..
ವಿಧಾನ ಪರಿಷತ್ ಎಂದರೆ ಚಿಂತಕರ ಚಾವಡಿಯಾಗಿರಬೇಕು. ಆದರೆ ಗೋಮುಖ ವ್ಯಾಘ್ರಗಳು, ಭೂ ಮಾಫಿಯಾದವರು, ಕ್ರಿಮಿನಲ್ ಹಿನ್ನೆಲೆಯುಳ್ಳವರ, ರಾಜಕೀಯ ಕುಟುಂಬಗಳ ರಕ್ಷಣಾ ಕೇಂದ್ರವಾಗುತ್ತಿದೆ. ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆ ಎಲ್ಲರೂ ತಲೆ ತಗ್ಗಿಸುವಂತೆ ನಡೆದಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮೈಸೂರಿನಲ್ಲಿ ಹೇಳಿಕೆ.
ಚುನಾವಣೆಗೆ ಸ್ಪರ್ಧಿಸಿದ್ದ ಹಲವಾರು ಅಭ್ಯರ್ಥಿಗಳು 30 ಕೋಟಿ ಹಣ ಖರ್ಚು ಮಾಡಿದ್ದಾರೆ. ಇದನ್ನೆಲ್ಲಾ ನೋಡಿದರೆ ನಮಗೆ ವಿಧಾನ ಪರಿಷತ್ ನ ಅವಶ್ಯಕತೆ ಇದೆಯಾ ಎನ್ನುವಂತಾಗಿದೆ. ಇದು ದೇಶಕ್ಕೆ ಅಪಾಯಕಾರಿ ಸಂದೇಶವಾಗಿದೆ.
ಈ ಬಗ್ಗೆ ಪ್ರತಿಯೊಬ್ಬರು ಚಿಂತನೆ ಮಾಡಬೇಕಿದೆ. ಕೇವಲ ಆರು ರಾಜ್ಯಗಳಲ್ಲಿ ಮಾತ್ರ ವಿಧಾನ ಪರಿಷತ್ ಕಾರ್ಯ ನಿರ್ವಹಿಸುತ್ತಿದೆ. ಈ ಸಂಬಂಧ ಸದ್ಯದಲ್ಲೇ ರಾಜ್ಯಪಾಲರು ಹಾಗೂ ಚುನಾವಣಾ ಆಯೋಗವನ್ನು ಭೇಟಿ ಮಾಡಿ ವಿಧಾನ ಪರಿಷತ್ತನ್ನು ರದ್ದು ಮಾಡುವಂತೆ ಒತ್ತಾಯಿಸುತ್ತೇವೆ.
ರಾಜ್ಯದ ಜನರ ಪರವಾಗಿ ಒತ್ತಾಯ ಪತ್ರವನ್ನು ಸಲ್ಲಿಸುತ್ತೇವೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮೈಸೂರಿನಲ್ಲಿ ಹೇಳಿಕೆ.