ಗಾಳಿಪಟದೊಂದಿಗೆ ಮೇಲಕ್ಕೆ ಹಾರಿದ ವ್ಯಕ್ತಿ – 40 ಅಡಿ ಎತ್ತದಿಂದ ಬಿದ್ದು ಗಾಯ…….
ದೊಡ್ಡ ಗಾಳಿಪಟ ಹಾರಿಸುವ ಹವ್ಯಾಸವೊಂದು ವ್ಯಕ್ತಿಯ ಜೀವಕ್ಕೆ ಅಪಾಯ ತಂದಿದೆ… ಗಾಳಿಪಟದ ಸೂತ್ರ ಹಿಡಿದು 40 ಅಡಿಗಳ ವರೆಗೂ ಗಾಳಿಪಟದ ಜೊತೆ ಮೇಲಕ್ಕೆ ಏರಿದ್ದಾನೆ. ನಂತರ ಕೈ ಸುಸ್ತು ಬಂದು ಸೂತ್ರ ಬಿಟ್ಟಿದ್ದಾನೆ. ಮೇಲಿನಿಂದ ಬಿದ್ದು ಗಾಯಗೊಂಡಿದ್ದಾನೆ. ಇದು ನಡೆದಿರುವುದು ಶ್ರೀಲಂಕಾ ದೇಶದ ಜಾಫ್ನಾ ನಗರದಲ್ಲಿ..
ಡಿಸೆಂಬರ್ 24 ರಂದು ಈ ಘಟನೆಯ ವಿಡಿಯೋ ವೈರಲ್ ಆಗಿದೆ. ನದ್ರಾಸ್ ಮನೋಹರನ್ ಎಂಬ ವ್ಯಕ್ತಿ ದೊಡ್ಡ ಗಾಳಿಪಟವನ್ನು ಹಾರಿಸಲು ಪ್ರಯತ್ನಿಸುತ್ತಿದ್ದ ಜೋರಾಗಿ ಬೀಸಿದ ಗಾಳಿಗೆ ಗಾಳಿಪಟದೊಂದಿಗೆ ಸುಮಾರು 40 ಅಡಿ ಎತ್ತರಕ್ಕೆ ಹಾರಿದ್ದಾನೆ. ಗಾಳಿಪಟದೊಂದಿಗೆ ನೇತಾಡಿ, ಕೈ ಸುಸ್ತು ಬಂದಾಗ ದಾರ ಬಿಟ್ಟಿದ್ದಾನೆ. ಕೆಲಕಾಲ ತೀವ್ರ ನೋವಿನಿಂದ ಬಳಲಿದ ವ್ಯಕ್ತಿ ಆಶ್ಚರ್ಯಕರ ರೀತಿಯಲ್ಲಿ ಎದ್ದು ಸ್ನೇಹಿತರ ಜೊತೆ ಎದ್ದು ಹೋಗಿದ್ದಾನೆ. ಮನೋಹರನ್ ಸದ್ಯ ಪಂತ್ ಪೆಡ್ರೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶ್ರೀಲಂಕಾದಲ್ಲಿ ಜನವರಿಯ ಮಾಸದಲ್ಲಿ ಥಾಯ್ ಪೊಂಗಲ್ ಹಬ್ಬವನ್ನ ಆಚರಿಸುತ್ತಾರೆ… ಈ ಹಬ್ಬದಲ್ಲಿ ಸಾಂಪ್ರದಾಯಿಕವಾಗಿ ಗಾಳಿಪಟವನ್ನ ಹಾರಿಸಲಾಗುತ್ತದೆ. ಅದಕ್ಕೆ ಈಗಿನಿಂದಲೇ ಸಿದ್ಧತೆಗಳು ಜರುಗುತ್ತಿರುತ್ತವೆ ಈ ಹಬ್ಬದಲ್ಲಿ ದೊಡ್ಡ ದೊಡ್ಡ ಗಾಳಿಪಟವನ್ನ ಹಾರಿಸಲಾಗುತ್ತದೆ. ಸ್ನೇಹಿತರು ಮತ್ತು ಬಂದು ಬಳಗದವರು ಸೇರಿ ಗಾಳಿಪಟವನ್ನ ಹಾರಸಿ ಆನಂದಿಸುತ್ತಾರೆ ಅದು ಇಲ್ಲಿನ ಸಂಪ್ರದಾಯ…








