ಅಪ್ರಾಪ್ತೆ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ…..
ಗುಜರಾತ್‌ನ ಡ್ಯಾಂಗ್ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಪೊಲೀಸರು ಆರು ಮಂದಿ ಯುವಕರು ಮತ್ತು ಮೂವರು ಅಪ್ರಾಪ್ತರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಈ ಘಟನೆ ಸುಮಾರು ಎರಡು ತಿಂಗಳ ಹಿಂದೆ ನಡೆದಿತ್ತು, ಆದರೆ ಇತ್ತೀಚೆಗೆ ಹುಡುಗಿಯ ಸಂಬಂಧಿಸಿದ ಅಪರಾಧದ ವೀಡಿಯೊವನ್ನುವನ್ನ ಸೋಶಿಯಲ್ ಮೀಡಿಯಾದಲ್ಲಿ ನೋಡಿದಾಗ ಬೆಳಕಿಗೆ ಬಂದಿದೆ. ಕೃತ್ಯವನ್ನು ಆರೋಪಿಯೊಬ್ಬ ತನ್ನ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ.
ಅಹ್ವಾ ತಾಲೂಕಿನಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಪಕ್ಕದ ಹಳ್ಳಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಬಾಲಕಿಯ ಮೇಲೆ ಆತನ ಸ್ನೇಹಿತನೇ ಅತ್ಯಾಚಾರ ಮಾಡಿದ್ದಾನೆ..ನಂತರ ಸ್ನೇಹಿತನಿಗಾಗಿ ಕಾಯುತ್ತಿದ್ದ ಯುವಕರು ಹುಡುಗಿಯನ್ನ ಹತ್ತಿರದ ಕಾಎಇಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ.
ಅತ್ಯಾಚಾರ ವೆಸಗಿದ ಬಳಿಕ ಬಾಲಕಿಗೆ ಈ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆಯೊಡ್ಡಿದ್ದಾರೆ. ಇದರಿಂದ ಭಯಗೊಂಡ ಬಾಲಕಿ ಸುಮಾರು ಎರಡು ತಿಂಗಳು ಮೌನವಾಗಿದ್ದಳು.
ಆದರೆ ಇತ್ತೀಚೆಗಷ್ಟೇ ಆಕೆಯ ಸಂಬಂಧಿಕರೊಬ್ಬರು ಈ ವೀಡಿಯೋ ನೋಡಿ ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.








