ಇಂದಿನಿಂದ ನೈಟ್ ಕರ್ಫ್ಯೂ, ಜಾರಿಗೊಳಿಸಲು ಪೊಲೀಸ್ ಸಿದ್ಧತೆ….
ಹೆಚ್ಚುತ್ತಿರುವ ಒಮಿಕ್ರಾನ್ ಪ್ರಕರಣಗಳ ದೃಷ್ಟಿಯಿಂದ, ಕರ್ನಾಟಕ ಸರ್ಕಾರವು ಡಿಸೆಂಬರ್ 28 ರಿಂದ ಜನವರಿ 07 ರವರೆಗೆ ರಾಜ್ಯದಲ್ಲಿ ‘ರಾತ್ರಿ ಕರ್ಫ್ಯೂ’ (10 PM ರಿಂದ 5 AM) ವಿಧಿಸಿದೆ. ನೈಟ್ ಕರ್ಫ್ಯೂ ಜಾರಿಗೊಳಸಲು ಪೊಲೀಸರು ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿದ್ದಾರೆ.
ಹೊಸ ವರ್ಷವನ್ನು ಆಚರಿಸಲು ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳು/ಕೂಟಗಳನ್ನು ಬೆಂಗಳೂರಿನಲ್ಲಿ ಎಲ್ಲಿಯೂ ಅನುಮತಿಸಲಾಗುವುದಿಲ್ಲ. ಅನಾವಶ್ಯಕವಾಗಿ ರಸ್ತೆಗೆ ಇಳಿಯುವ ಜನರನ್ನು ಪೊಲೀಸರು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ನೈಟ್ ಕರ್ಫ್ಯೂ ಹಿನ್ನೆಲೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು 10 ಗಂಟೆಗೆ ಎಲ್ಲಾ ಡಿಸಿಪಿಗಳನ್ನು ಆಹ್ವಾನಿಸಿದ್ದು, ಸಭೆ ನಡೆಸಲಿದ್ದಾರೆ.
ನೈಟ್ ಕರ್ಫ್ಯೂ ಎನಿರುತ್ತೆ….
ರಾತ್ರಿ ಪಾಳಿಯ ಕೆಲಸಗಾರರು ಕಂಪನಿ ಮತ್ತು ಕಾರ್ಮಿಕರ ನೌಕರರು ಐ ಡಿ ಕಾರ್ಡ್ ತೋರಿಸಿ ಓಡಾಡಬಹುದು
ಗೂಡ್ಸ್ ಸೇವೆ ಬಸ್ ರೈಲು ಸೇವೆ ಇರಲಿದೆ. ರಾತ್ರಿ ಸಂಚಾರ ಮಾಡಿದವರು ಬಸ್ ಟಿಕೆಟ್ ತೋರಿಸಿ ಅಡ್ಡಾಡಬಹುದು.
ಫುಡ್ ಹೋಂ ಡೆಲಿವರಿ ಗೆ ಅನುಮತಿ ಇದೆ
ಇ ಕಾಮರ್ಸ್ ಸಂಚಾರಕ್ಕೆ ಅವಕಾಶ ಇದೆ.
ಆಟೋ ಕ್ಯಾಬ್ ಅವಕಾಶ ಇದೆ
ಏನಿರಲ್ಲ….
ನೈಟ್ ಕರ್ಫ್ಯೂ ವೇಳೆ ಲೇಟ್ನೈಟ್ ಪಾರ್ಟಿ, ಸಮಾರಂಭಗಳಿಗೆ ಬ್ರೇಕ್
ಪಬ್ ಬಾರ್ ಬಂದ್ , ಫುಡ್ ಸ್ಟ್ರೀಟ್ಗಳು ಬಂದ್
ಸಿನೆಮಾ ಥಿಯೇಟರ್ ಬಂದ್ ಇರಲಿವೆ
ಇಂದಿನಿಂದ ಹತ್ತು ದಿನಗಳ ಕಾಲ ಪಬ್ ಬಾರ್ ರೆಸ್ಟೋರೆಂಟ್ ಗಳಲ್ಲಿ ಆಸನ ಸಾಮರ್ಥ್ಯದ 50% ಜನರಿಗೆ ಮಾತ್ರ ಸೇವೆ ನೀಡಲು ಅವಕಾಶ ನೀಡಲಾಗಿದೆ.