NBK Unstoppable – ಸಮರಸಿಂಹರೆಡ್ಡಿ ಜೊತೆ ಅರ್ಜುನ್ ರೆಡ್ಡಿ ಮಾತುಕತೆ…
ನಟ ನಂದಮುರಿ ಬಾಲಕೃಷ್ಣ ಆಹಾ ವೀಡಿಯೋ ಸ್ಟ್ರೀಮಿಂಗ್ ಪ್ಲಾಟ್ ಫರ್ಮ್ ಗಾಗಿ ನಡೆಸಿಕೊ0ಡುತ್ತಿರು ಟಾಕಿಂಗ್ ಶೋ, NBK Unstoppable ಗಾಗಿ ಈ ಭಾರಿ ಲೈಗರ್ ಚಿತ್ರ ತಂಡ ಆಗಮಸಿದೆ. ನಟ ವಿಜಯ್ ದೇವರಕೊಂಡ, ನಿರ್ದೇಶಕ ಪುರಿ ಜಗನ್ನಾಥ್ ಮತ್ತು ನಟಿ ನಿರ್ಮಾಪಕಿ ಚಾರ್ಮಿಕೌರ್ ಬಾಲಯ್ಯ ಜೊತೆ ಮಾತುಕಥೆಗೆ ಆಗಮಿಸಿದ್ದಾರೆ.
ಪ್ರೋಮೋದ ಭಾಗವಾಗಿ, ವಿಜಯ್ ಮತ್ತು ಬಾಲಕೃಷ್ಣ ಅವರು ತಮ್ಮ ಮುಂಬರುವ ಚಿತ್ರ ಲೈಗರ್ ಪ್ರಚಾರಕ್ಕಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ವೇದಿಕೆ ಮೇಲೆ ಪರಸ್ಪರರ ಮೇಲೆ ಪಂಚ್ ಡೈಲಾಗ್ ಹೇಳುವ ಪ್ರೋಮೋ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ.
ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಚಿತ್ರದ ಮೂಲಕ ವಿಜಯ್ ದೇವರಕೊಂಡ ಬಾಲಿವುಡ್ಗೆ ಪಾದಾರ್ಪಣೆ ಮಾಡಲಿದ್ದಾರೆ. ಇದರಲ್ಲಿ ನಟಿ ಅನನ್ಯ ಪಾಂಡೆ ಕೂಡ ನಟಿಸಿದ್ದಾರೆ, ಜೊತೆಗೆ ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರವನ್ನು ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದ್ದು, ಇತರ ಪ್ರಾದೇಶಿಕ ಭಾಷೆಗಳಿಗೂ ಡಬ್ ಆಗಲಿದೆ. ತೆಲುಗು ಅಲ್ಲದೆ, ವಿಜಯ್ ತಮ್ಮ ಹಿಂದಿಯಲ್ಲೂ ಡಬ್ ಸ್ವತಃ ಮಾಡಿದ್ದಾರೆ.