#Breaking ದೆಹಲಿ ಹೂವಿನ ಮಾರ್ಕೇಟ್ ನಲ್ಲಿ ಬಾಂಬ್ ಪತ್ತೆ..
ಪೂರ್ವ ದೆಹಲಿಯ ಗಾಜಿಪುರ ಹೂವಿನ ಮಾರುಕಟ್ಟೆಯಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು, ಬ್ಯಾಗ್ನಿಂದ ಸುಧಾರಿತ ಸ್ಫೋಟಕ (ಐಇಡಿ) ಬಾಂಬ್ ವಶಪಡಿಸಿಕೊಳ್ಳಲಾಗಿದೆ.
ಅನುಮಾನಾಸ್ಪದ ಬ್ಯಾಗ್ ಪತ್ತೆಯಾದ ನಂತರ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಮಾರುಕಟ್ಟೆಗೆ ಧಾವಿಸಿದರು. ವಿಶೇಷ ಸೆಲ್ ಅಧಿಕಾರಿಗಳು ಭಯೋತ್ಪಾದನಾ ನಿಗ್ರಹ ಪಡೆ ರಾಷ್ಟ್ರೀಯ ಭದ್ರತಾ ಗಾರ್ಡ್ (ಎನ್ಎಸ್ಜಿ) ಅನ್ನು ಸಹ ಕರೆಸಲಾಯಿತು. ಅಗ್ನಿಶಾಮಕ ಇಂಜಿನ್ಗಳನ್ನು ಸಹ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಐಇಡಿಯನ್ನು ತಟಸ್ಥಗೊಳಿಸಲು ಎನ್ಎಸ್ಜಿ ಪಡೆ ನಿಯಂತ್ರಿತ ಸ್ಫೋಟವನ್ನು ನಡೆಸಿತು. ಸ್ಫೋಟಕ ಬಳಸಿದ ಅವಶೇಷಗಳು ಲಭ್ಯವಾದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ. ಸ್ಫೋಟಕ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ದೆಹಲಿ ಪೊಲೀಸ್ ವಿಶೇಷ ಕೋಶದಲ್ಲಿ ಪ್ರಕರಣವನ್ನು ದಾಖಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಎಎನ್ಐಗೆ ತಿಳಿಸಿದ್ದಾರೆ.
#WATCH | Delhi: National Security Guard (NSG) carries out a controlled explosion of the IED found at East Delhi's Ghazipur Flower Market pic.twitter.com/tV0PMYxSLF
— ANI (@ANI) January 14, 2022