ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಮಹಾಮಾರಿ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇಂದು ಹೊಸದಾಗಿ 12 ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆಯಾಗಿದೆ.
ಮೇ 6ರ ಸಂಜೆ 5 ಗಂಟೆಯಿಂದ ಮೇ 7ರ ಸಂಜೆ 5 ಗಂಟೆವರೆಗೂ ರಾಜ್ಯದಲ್ಲಿ 12 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಪ್ರಸ್ತುತ 308 ಜನರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟು ಪ್ರಕರಣಗಳ ಪೈಕಿ 30 ಮಂದಿ ಸಾವಿಗೀಡಾಗಿದ್ದು, 366 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು ದಾವಣಗೆರೆಯ 55 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಅವರು ತೀವ್ರ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಹೊಸದಾಗಿ ಸೋಂಕು ದೃಢಪಟ್ಟವರ ಪೈಕಿ ಬೆಂಗಳೂರು ನಗರ, ಧಾರವಾಡ ಹಾಗೂ ಬೆಳಗಾವಿ(ಹಿರೇ ಬಾಗೇವಾಡಿ)ಯ ತಲಾ 1 ಪ್ರಕರಣಗಳು ಸೇರಿವೆ. ಉಳಿದಂತೆ ಕಲಬುರ್ಗಿ, ಬಾಗಲಕೋಟೆಯ ಬಾದಾಮಿ ಹಾಗೂ ದಾವಣಗರೆಯಲ್ಲಿ ತಲಾ 3 ಹೊಸ ಪ್ರಕರಣಗಳು ಪತ್ತೆಯಾಗಿವೆ.