ಕರೊನಾ ಬಗ್ಗೆ ಸರ್ಕಾರ ಸೂಚಿಸಿದವರು ಮಾತ್ರ ಮಾತನಾಡಬೇಕು – ಕೆ ಸುಧಾಕರ್
ಬೆಂಗಳೂರು: ಕರೊನಾ ವೈರಸ್ಸ ನ ಕುರಿತು ವೈದ್ಯರು ಬಿನ್ನ ರೀತಿಯಲ್ಲಿ ಹೇಳಿಕೆ ಕೊಡುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣವಿಸಿದೆ ಹಾಗಾಗಿ ಕೊರೊನಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸಚಿವ ಡಾ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ವೈದ್ಯರಿಂದ ನಾವಿದನ್ನ ನಿರೀಕ್ಷೆ ಮಾಡಿರಲಿಲ್ಲ ವೈದ್ಯರು ಬಿನ್ನ ಬಿನ್ನ ರೀತಿಯ ಹೇಳಿಕೆ ನಿಡುತ್ತಿದ್ದಾರೆ, ಈಗಾಗಬಾರದು ಸರ್ಕಾರ ಇದಕ್ಕಾಗಿ ಫ್ಯಾನಲಿಸ್ಟ್ ಗಳನ್ನ ರೆಡಿ ಮಾಡ್ತಿದೆ. ಆ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಲಿದೆ. ಅಧಿಕೃತ ಮಾನವ ಸಂಪನ್ಮೂಲ ವ್ಯಕ್ತಿಗಳು ಮಾತ್ರ ಹೇಳಿಕೆ ಕೊಡಬಹುದಾಗಿದೆ. ಆದ್ರೆ ಕೊರೊನಾ ಬಗ್ಗೆ ಯಾವುದೇ ದಾಖಲೆ ಇಲ್ಲದೆ ಮಾತಾಡಿದ್ರೆ ಆಕ್ಟ್ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದು ವೈದ್ಯರಿಗೆ ಎಚ್ಚರಿಕೆ ನೀಡಿದ್ದಾರೆ.
ಆದರೆ ಸರ್ಕಾರದ ಕ್ರಮಕ್ಕೆ ವೈದ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ನಮ್ಮ ಬಾಯಿ ಮುಚ್ಚುವ ಕೆಲಸವನ್ನ ವ್ಯವಸ್ತಿತವಾಗಿ ಮಾಡುತ್ತಿದೆ ಎಂದು ಹೇಳಿದ್ದಾರೆ. ವೈದ್ಯರನ್ನ ಕಟ್ಟಿಹಾಕುವ ಹುನ್ನಾರ ಇರುವ ಆರೋಪ ಕೇಳಿ ಬಂದಿದೆ..








