ಅಯ್ಯೋ ವಿಧಿಯೇ | ಬಾಲಕನ ಬಾಳಿಗೆ ಜೋಕಾಲಿಯ ಸೀರೆಯೇ ಉರುಳಾಯ್ತು..!
ಶಿವಮೊಗ್ಗ : ಜೋಕಾಲಿಗೆ ಕಟ್ಟಿದ್ದ ಸೀರೆಯೇ ಬಾಲಕನ ಬಾಲಿಗೆ ಉರುಳಾಗಿರುವ ಘಟನೆ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ನಡೆದಿದೆ.
13 ವರ್ಷದ ಕಿಶೋರ್ ಮೃತ ದುರ್ದೈವಿಯಾಗಿದ್ದಾನೆ.
ಮೃತ ಕಿಶೋರ್ ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದೊಡ್ಡೇರಿ ಗ್ರಾಮದವರಾಗಿದ್ದು, ಹಾಡೋನಹಳ್ಳಿಯ ಸಂಬಂಧಿಕರ ಮನೆಯಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ.
ಮನೆಯಲ್ಲಿ ಸೀರೆಯಿಂದ ಮಾಡಿಕೊಂಡಿದ್ದ ಜೋಕಾಲಿ ಆಟ ಆಡುತ್ತಿದ್ದ ವೇಳೆ ಕಿಶೋರ್ ನ ಕುತ್ತಿಗೆಗೆ ಕುಣಿಕೆಯಾಗಿ ಸುತ್ತಿಕೊಂಡಿದೆ.
ಕಿಶೋರ್ ಗೆ ಸೀರೆ ಬಿಗಿಯಾಗಿ ಸುತ್ತಿಕೊಂಡಿದ್ದರಿಂದ ಕ್ಷಣಾರ್ಧದಲ್ಲಿಯೇ ಉಸಿರು ನಿಂತಿದೆ.
ಇನ್ನು ಘಟನೆ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.