ಕೇರಳ ವಿಮಾನ ಅಪಘಾತದಲ್ಲಿ 14 ಮಂದಿ ದುರ್ಮರಣ, 123 ಮಂದಿಗೆ ಗಾಯ
ಕೋಝಿಕೋಡ್, ಅಗಸ್ಟ್ 7: ಕೇರಳದ ಕರಿಪುರ ವಿಮಾನ ನಿಲ್ದಾಣದ ರನ್ ವೇಯಲ್ಲಿ ಶುಕ್ರವಾರ 191 ಜನರನ್ನು ಹೊತ್ತು ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸ್ಕಿಡ್ ಆಗಿದೆ. ವರದಿಗಳ ಪ್ರಕಾರ, ಅಪಘಾತದಲ್ಲಿ 14 ಮಂದಿ ಮೃತಪಟ್ಟಿದ್ದು, 123 ಮಂದಿ ಗಾಯಗೊಂಡಿದ್ದಾರೆ ಮತ್ತು 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಹತ್ತು ಮಕ್ಕಳು, ಇಬ್ಬರು ಪೈಲಟ್‌ಗಳು ಮತ್ತು ಐದು ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 184 ಪ್ರಯಾಣಿಕರು ವಿಮಾನದಲ್ಲಿದ್ದರು.
ದುಬೈನಿಂದ ಕೋಝಿಕೋಡ್‌ಗೆ ಆಗಮಿಸಿದ ಐಎಕ್ಸ್ -1344 ವಿಮಾನವು ರಾತ್ರಿ 7.45 ರ ಸುಮಾರಿಗೆ ಕರಿಪುರ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಸ್ಕಿಡ್ ಆಗಿದ್ದು ಅಪಘಾತ ಸಂಭವಿಸಿದೆ ಎಂದು ಕೊಂಡೊಟ್ಟಿ ಪೊಲೀಸರು ತಿಳಿಸಿದ್ದಾರೆ.

ಒಟ್ಟು 191 ಜನರು – ಹತ್ತು ಶಿಶುಗಳು, ಇಬ್ಬರು ಪೈಲಟ್‌ಗಳು ಮತ್ತು ಐದು ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 184 ಪ್ರಯಾಣಿಕರು ವಿಮಾನದಲ್ಲಿದ್ದರು. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತದ ಕುರಿತು ಹೆಚ್ಚಿನ ಮಾಹಿತಿಗಾಗಿ ಕರಿಪುರ ವಿಮಾನ ನಿಲ್ದಾಣ ನಿಯಂತ್ರಣ ಕೊಠಡಿ ಸಹಾಯವಾಣಿ ಸಂಖ್ಯೆ 04832719493 ಅನ್ನು ತೆರೆದಿದೆ. ಅಧಿಕಾರಿಗಳ ಸಹಾಯವಾಣಿ ಸಂಖ್ಯೆ 0543090572, 0543090573, 0543090575 ಮತ್ತು 0565463903.
ವಿಮಾನವು ಸುಮಾರು 35 ಅಡಿಗಳಷ್ಟು ಕೆಳಗೆ ಬಿದ್ದಿದ್ದು ಮುಂಭಾಗದ ಅರ್ಧವು ಹಾನಿಗೊಳಗಾಗಿದೆ. ಹಿಂಭಾಗದ ಅರ್ಧಭಾಗದಲ್ಲಿರುವ ಜನರು ಬದುಕುಳಿದಿದ್ದಾರೆ ಎಂದು ವರದಿಗಳು ತಿಳಿಸಿವೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬಾಯಿಯಿಂದ ಏರ್ ಇಂಡಿಯಾದ ಐ.ಎಕ್ಸ್.-344 ವಿಮಾನವು ಕೇರಳಕ್ಕೆ ಆಗಮಿಸಿತ್ತು. ಸ್ಥಳದಲ್ಲಿ ಎನ್‌ಡಿಆರ್‌ಎಫ್ ಬೀಡು ಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದೆ. ಈ ಘಟನೆಯ ವಿವರವಾದ ತನಿಖೆಗೆ ಡಿಜಿಸಿಎ ಆದೇಶಿಸಿದೆ.








