ಚಿಕ್ಕಮಗಳೂರು: ಕದ್ದ ಹಣ ಮರಳಿ ನೀಡುವುದಕ್ಕಾಗಿ ಸಾಲ ಮಾಡಿ ಕೊನೆಗೆ ತೀರಿಸಲಾಗದೆ ಭಯದಿಂದಾಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಶ್ರೀನಿವಾಸ್ (14) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಈ ಘಟನೆ ಜಿಲ್ಲೆಯ ಕೊಪ್ಪ ಪಟ್ಟಣದ ಬಿಜಿಎಸ್ ಖಾಸಗಿ ಶಾಲೆಯಲ್ಲಿ ನಡೆದಿದೆ. ಅಜ್ಜಂಪುರ ತಾಲೂಕಿನ ಹಿರೇಬಳ್ಳೇಕೆರೆ ಗ್ರಾಮದ ವಿದ್ಯಾರ್ಥಿಯೇ ಆತ್ಮಹತ್ಯೆ ಮಾಡಿಕೊಂಡವನು ಎನ್ನಲಾಗಿದೆ.
ಸ್ಮಾರ್ಟ್ ವಾಚ್ ಖರೀದಿಗೆ ಹಾಸ್ಟೆಲ್ ವಾರ್ಡನ್ ನಿಂದ ಎರಡು ಸಾವಿರ ರೂ. ಹಣ ಕಳ್ಳತನ ಮಾಡಿ ಬಾಲಕ ಸಿಕ್ಕಿ ಬಿದ್ದಿದ್ದ. ಹಾಸ್ಟೆಲ್ ವಾರ್ಡನ್ ಗೆ ಹಣ ಹಿಂತಿರುಗಿಸಲು ಮೃತ ಶ್ರೀನಿವಾಸ್ ತನ್ನ ಸ್ನೇಹಿತರಿಂದ 1500 ರೂ. ಸಾಲ ಮಾಡಿದ್ದ. ಆದರೆ, ಮರಳಿ ನೀಡಲಾಗದೆ ಸಾವಿಗೆ ಶರಣಾಗಿದ್ದಾನೆ. ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.