2ನೇ ದಿನ 17,000 ಮಂದಿಗೆ ಲಸಿಕೆ: ಹರ್ಷವರ್ಧನ್
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆ ಅಭಿಮಾನಕ್ಕೆ ಚಾಲನೆ ನೀಡಿದ್ದು, ದೇಶಾದ್ಯಂತ ಕೊರೊನಾ ಲಸಿಕೆ 2ನೇ ದಿನ ಯಶಸ್ವಿಯಾಗಿದೆ. ಈಗಾಗಲೇ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ವಿತರಣೆ ಮಾಡಲಾಗ್ತಿದೆ. ಇನ್ನೂ ಬೇರೆ ದೇಶಗಳ ಲಸಿಕೆಗೆ ಹೋಲಿಕೆ ಮಾಡಿದ್ರೆ ನಮ್ಮಲ್ಲಿ ಸೈಡ್ ಎಫೆಕ್ಟ್ಸ್ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.
ಕೊರೊನಾ ಲಸಿಕೆಯ ಕಾಲ್ ಬಂದ್ರೆ ಎಚ್ಚರ..! ಇಂತಹದ್ದೇ ಕರೆ ನಂಬಿ 12 ಲಕ್ಷ ರೂ. ಕಳೆದುಕೊಂಡ ವೃದ್ಧ.!
ಸುದ್ದಿಗೋಷ್ಠಿಯಲ್ಲಿ ಲಸಿಕೆ ಬಗ್ಗೆ ಮಾತನಾಡಿರುವ ಅವರು 2ನೇ ದಿನ 6 ರಾಜ್ಯಗಳ 153 ನಗರಗಳಲ್ಲಿ ಒಟ್ಟು 17,000 ಮಂದಿಗೆ ಕೊರೊನಾ ಲಸಿಕೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಭಾನುವಾರ ರಜಾ ದಿನವಾದ್ದರಿಂದ 6 ರಾಜ್ಯಗಳಲ್ಲಿ ಮಾತ್ರ ಲಸಿಕೆ ಹಾಕಲಾಗಿದೆ. ಲಸಿಕೆ ಪಡೆದವರಲ್ಲಿ ಕೆಲವರಿಗೆ ಮಾತ್ರ ಅಡ್ಡ ಪರಿಣಾಮ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








