187 coinage ಇತ್ತಿಚಿನ ದಿನಗಳ ಚಿತ್ರ ವಿಚಿತ್ರ ಘಟನೆ ಬೆಳಕಿಗೆ ಬರುತ್ತಿವೆ . ಹೌದು ಇದಕ್ಕೆ ಪುಷ್ಟಿ ನೀಡುವಂತೆ ಬಾಗಲಕೋಟೆಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ .
ಬಾಗಲಕೋಟೆ ಜಿಲ್ಲೆಯ HSK ಆಸ್ಪತ್ರೆ ವೈದ್ಯರು 187 ನಾಣ್ಯಗಳನ್ನು ಎಂಡೋಸ್ಕೋಪಿ ಮೂಲಕ ವ್ಯಕ್ತಿ ಹೊಟ್ಟೆಯ ನಾಣ್ಯಗಳನ್ನು ಹೊರತೆಗೆ ವೈದ್ಯರಿಗೆ ಶಸ್ತ್ರಚಿಕಿತ್ಸೆಗೆ ಪ್ರಶಂಸೆ ವ್ಯಕ್ತವಾಗಿದೆ.
58 ವರ್ಷದ ವೃದ್ಧ ನಾಣ್ಯ ನುಂಗಿದ್ದ ರಾಯಚೂರು ಜಿಲ್ಲೆ ಲಿಗಸುಗೂರು ತಾಲೂಕಿನ ಸಂತೆಕೆಲ್ಲೂರು ಗ್ರಾಮದ ದ್ಯಾಮಪ್ಪ ಹರಿಜನ HSK ಆಸ್ಪತ್ರೆಯ ವೈದ್ಯರಾದ ಡಾ ಈಶ್ವರ ಕಲಬುರ್ಗಿ ಅವರು ಈ ಶಸ್ತ್ರ ಚಿಕಿತ್ಸೆಯಲ್ಲಿ 5 ರೂ 56 ನಾಣ್ಯ, 2 ರೂ 51 ನಾಣ್ಯ ಹಾಗೂ 1 ರೂ 80 ನಾಣ್ಯಗಳು ಸೇರಿ ಒಟ್ಟು 187 ನಾಣ್ಯಗಳನ್ನು ಹೊರ ತೆಗೆದಿದ್ದಾರೆ.
ವೃದ್ದ ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಗೆ ದಾಖಲಾಗಿದ್ದರು . ಎಕ್ಸರೇಯಲ್ಲಿ ನಾಣ್ಯಗಳು ಪತ್ತೆಯಾಗಿದ್ದವು. ವ್ಯಕ್ತಿ ಜೀವ ಅಪಾಯದಲ್ಲಿರುವುದನ್ನು ಅರಿತ ವೈದ್ಯರು ಎಂಡೋಸ್ಕೋಪಿ ಮಾಡೂವ ಮೂಲಕ ನಾಣ್ಯಗಳನ್ನು ಹೊರತೆಗೆದಿದ್ದಾರೆ.