ನ್ಯೂಯಾರ್ಕ್‌ ಅಪಾರ್ಟ್ಮೆಂಟ್ ನಲ್ಲಿ ಬೆಂಕಿ – ಮಕ್ಕಳು ಸೇರಿ 19 ಜನ ಸಜೀವ ದಹನ

1 min read

ನ್ಯೂಯಾರ್ಕ್‌ನ  ಅಪಾರ್ಟ್ಮೆಂಟ್ ನಲ್ಲಿ ಬೆಂಕಿ – ಮಕ್ಕಳು ಸೇರಿ 19 ಜನ ಸಜೀವ ದಹನ

ಅಮೆರಿಕಾದ ನ್ಯೂಯಾರ್ಕ್‌ನ  ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಂಬತ್ತು ಮಕ್ಕಳು ಸೇರಿದಂತೆ 19 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.  ಭಾನುವಾರ ಬೆಳಿಗ್ಗೆ ನ್ಯೂಯಾರ್ಕ್‌ನ ಬ್ರಾಂಕ್ಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಈ ಭೀಕರ ಅಪಘಾತದಲ್ಲಿ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನ ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ ಗಾಯಗೊಂಡವರಲ್ಲಿ ಹತ್ತಾರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.  ಅಪಾರ್ಟ್‌ಮೆಂಟ್‌ನ ಪ್ರತಿ ವಾಸಿಸುವ ಪ್ರತಿ ಮನೆಗೂ ಬೆಂಕಿಯ ಪರಿಣಾಮ ಬೀರಿದ್ದು ಹೊಗೆಯಿಂದ ಉಸಿರಾಡಲು ತೊಂದರೆ ಅನುಭಸುತ್ತಿದ್ದಾರೆ.  ಅಗ್ನಿಶಾಮಕ ಇಲಾಖೆ ಆಯುಕ್ತ ಡೇನಿಯಲ್ ನೀಗ್ರೋ ಪ್ರಕಾರ, ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.

ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬುದರ ಕುರಿತು ಇನ್ನೂ ಅಧಿಕೃತ ದೃಢಪಟ್ಟಿಲ್ಲ. ಆದರೆ ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ಪ್ರಕಾರ, ಬೆಂಕಿ ಬಹುಶಃ ಕೋಣೆಯ ಹೀಟರ್‌ನಿಂದ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.  ಇದು ನಗರದಲ್ಲಿ ನಡೆದ ಅತ್ಯಂತ ಭೀಕರ ಅಪಘಾತ ಎಂದು ಮೇಯರ್ ಬಣ್ಣಿಸಿದ್ದಾರೆ.

ಅಗ್ನಿಶಾಮಕ ಕಮಿಷನರ್ ಡೇನಿಯಲ್ ನೀಗ್ರೋ ಮಾಧ್ಯಮದೊಂದಿಗಿನ ಸಂವಾದದ ಸಂದರ್ಭದಲ್ಲಿ, ಬೆಂಕಿ ಎಷ್ಟು ಭೀಕರವಾಗಿದೆಯೆಂದರೆ ಅದು 19 ಅಂತಸ್ತಿನವರೆಗೂ ಕಟ್ಟಡವನ್ನು ಆವರಿಸಿದೆ ಎಂದು ಹೇಳಿದ್ದಾರೆ. 200 ಅಗ್ನಿಶಾಮಕ ಸಿಬ್ಬಂದಿಗಳ ನೆರವಿನಿಂದ ಬೆಂಕಿಯನ್ನು ಹತೋಟಿಗೆ ತರಲಾಗಿದೆ.

 

ಕೋವಿಡ್ ಅಪ್ಡೇಟ್ – 7 ಲಕ್ಷ ಗಡಿ ದಾಟಿದ ಸಕ್ರಿಯ ಪ್ರಕರಣಗಳ ಸಂಖ್ಯೆ…

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd