ಇಟಲಿ, ಫ್ರಾನ್ಸ್ ನಲ್ಲಿ 2ನೇ ಹಂತದ ಸಂಪೂರ್ಣ ಲಾಕ್ ಡೌನ್ ಘೋಷಣೆ..!

1 min read

ಇಟಲಿ, ಫ್ರಾನ್ಸ್ ನಲ್ಲಿ 2ನೇ ಹಂತದ ಸಂಪೂರ್ಣ ಲಾಕ್ ಡೌನ್ ಘೋಷಣೆ..!

ನವದೆಹಲಿ: ಇಟಲಿ ಮತ್ತು ಫ್ರಾನ್ಸ್ ನಲ್ಲಿ ಮತ್ತೆ ಕೊರೊನಾ ಹಾವಳಿ ಮಿತಿ ಮೀರಿರುವ ಕಾರಣ ಈ ರಾಷ್ಟ್ರಗಳಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆಯಾಗಿದೆ. ಮಾರ್ಚ್ 15 ರಿಂದ ಇಟಲಿಯಲ್ಲಿ ಲಾಕ್ಡೌನ್ ಘೋಷಣೆಯಾಗಿತ್ತು. ಇದೀಗ ಫ್ರಾನ್ಸ್ ನಲ್ಲೂ ಮಾರ್ಚ್ ಲಾಕ್ ಡೌನ್ ಜಾರಿಯಾಗಿದೆ. ಇನ್ನೂ ಜರ್ಮನಿಯಲ್ಲೂ ಕೊರೊನಾ ವಿಕೋಪ ಹೆಚ್ಚಾಗಿದ್ದು, ಲಾಕ್ ಡೌನ್ ಮಾಡುವ ಚಿಂತನೆಯಲ್ಲಿ ಸರ್ಕಾರವಿದೆ.

ಭಾರತದಲ್ಲಿ ಕೊರೊನಾವೈರಸ್ ಅಬ್ಬರ ಮತ್ತೆ ಮುಂದುವರೆದಿದೆ.  ಕೆಲ ದಿನಗಳ ವರೆಗೂ ಕಡಿಮೆಯಾಗಿದ್ದ ಕೊರೊನಾ ಪ್ರಕರಣಗಳು ಇದೀಗ ಮತ್ತೆ ಹೆಚ್ಚಾಗಿದೆ. ಭಾರತದಲ್ಲಿ ಒಂದೇ ದಿನ 39726 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, 103 ದಿನಗಳ ಬಳಿಕ ಕಳೆದ 24 ಗಂಟೆಯಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಆತಂಕ ಸೃಷ್ಟಿ ಮಾಡಿದೆ.  2020ರ ನವೆಂಬರ್ 29ರ ಬಳಿಕ ಗರಿಷ್ಠ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಒಂದೇ ದಿನ 154 ಜನರು ಮಹಾಮಾರಿಗೆ ಬಲಿಯಾಗಿದ್ದು, 20,654 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ಐಪಿಎಲ್ ಕ್ರಿಕೆಟ್ ಆಟದ ಅಂದವನ್ನು ಹೆಚ್ಚಿಸಿದೆ – ಸಚಿನ್ ತೆಂಡುಲ್ಕರ್

13 ವರ್ಷದ ಬಾಲಕನನ್ನು ಬಲವಂತವಾಗಿ ಮದುವೆಯಾದ ಶಿಕ್ಷಕಿ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd