ಮಡಿಕೇರಿ: ಜನ್ಮ ಪಡೆದ ದಿನವೇ ತಾಯಿ ಆನೆಯಿಂದ ಬೇರ್ಪಟ್ಟಿದ್ದ ಮರಿ ಆನೆಯನ್ನು ಅರಣ್ಯ ಅಧಿಕಾರಿಗಳು ತಾಯಿಯ ಬಳಿ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ (Virajpete) ಹತ್ತಿರದ ನರಿಯಂದಡ ಗ್ರಾಪಂ ಕರಡ ಗ್ರಾಮದ ಕೀಮಲೆ ಕಾಡಿನ ಹತ್ತಿರ ಕಾಡಾನೆಯೊಂದು (Elephant) ಮರಿ ಹಾಕಿ, ಜನರ ಗದ್ದಲದಿಂದಾಗಿ ಹೆದರಿ ಮರಿ ಬಿಟ್ಟು ಕಾಡಿನೊಳಗೆ ಹೋಗಿತ್ತು. ಆದರೆ, ಸದ್ಯ ತಾಯಿ ಆನೆ ಜೊತೆ ಮರಿಯಾನೆಯನ್ನು ಸೇರಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕೀಮಲೆ ಕಾಡಿನ ಮನೆಯೊಂದರ ಆವರಣದಲ್ಲಿ ಕಾಡಾನೆ ಮರಿ ಹಾಕಿತ್ತು. ಹೀಗಾಗಿ ಅಕ್ಕ ಪಕ್ಕದ ಗ್ರಾಮಸ್ಥರು ತಂಡೋಪತಂಡವಾಗಿ ಬಂದು ಮರಿ ವೀಕ್ಷಿಸಲು ಬರಲು ಆರಂಭಿಸಿದರು. ಹೀಗಾಗಿ ಹೆದರಿದ ಕಾಡಾನೆಯು ಮರಿಯನ್ನು ಬಿಟ್ಟು ಹೋಗಿತ್ತು. ಹೀಗಾಗಿ ಮರಿ ಆನೆಯ ರೋಧನೆ ಮುಗಿಲು ಮುಟ್ಟಿತ್ತು. ಗ್ರಾಮಸ್ಥರು ಮರಿಯಾನೆಗೆ ಹಾಲು ಉಣಿಸಿ ಆರೈಕೆ ಮಾಡಿದ್ದರು. ನಂತರ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮರಿಯಾನೆಗೆ ಗ್ಲೂಕೋಸ್ ನೀಡಿ ದಟ್ಟ ಅರಣ್ಯದ ನಡುವೆ ಸಾಗಿ ಮರಿಯಾನೆಯನ್ನು ತಾಯಿಯಾನೆಯೊಂದಿಗೆ ಸೇರಿಸಿದ್ದಾರೆ. ಕಾಡಾನೆ ಮರಿ ಬಿಟ್ಟು ಸುಮಾರು 7 ಕಿ.ಮೀ ದೂರ ಹೋಗಿತ್ತು ಎನ್ನಲಾಗಿದೆ.