ಆಂಧ್ರಪ್ರದೇಶ : ಮಸೀದಿಯೊಂದರ ಬಳಿ ಇದ್ದ ಭಿಕ್ಷುಕನ ಬಳಿ ಎರಡು ಲಕ್ಷ ರೂಪಾಯಿ ನಗದು ಪತ್ತೆಯಾದ ಘಟನೆ ಕರ್ನೂಲ್ ಜಿಲ್ಲೆಯ ಧೋಣ್ ಬಳಿ ನಡೆದಿದೆ. ಈ ಭಿಕ್ಷುಕನನ್ನು ಶ್ರೀನು ಎಂದು ಗುರುತಿಸಲಾಗಿದ್ದು, ಆತನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವ್ಯಕ್ತಿ ತೆಲಂಗಾಣದ ಮೆಹಬೂಬ್ ನಗರಕ್ಕೆ ಸೇರಿದವನೆಂದು ಧೋಣ್ ನ ಸರ್ಕಲ್ ಇನ್ಸ್ ಪೆಕ್ಟರ್ ಸ್ಪಷ್ಟಪಡಿಸಿದ್ದಾರೆ.
ಈತನ ಬಳಿಯಿದ್ದ ನಗದು ಹಣದಲ್ಲಿ 11 ಸಾವಿರ ರೂಪಾಯಿ ಹಳೆಯ ನೋಟುಗಳು ಹಾಗೂ 1.25 ಲಕ್ಷ ರೂಪಾಯಿ ಹೊಸ ನೋಟುಗಳು ಕಂಡುಬಂದಿವೆ. ಇದರ ಜೊತೆಗೆ 12 ಅಂಗಿಗಳು ಕೂಡಾ ಪತ್ತೆಯಾಗಿದ್ದು, ಪೊಲೀಸರಲ್ಲಿ ಅಚ್ಚರಿ ಮೂಡಿಸಿದೆ. ಈ ವ್ಯಕ್ತಿಯನ್ನು ಈಗ ಪೊಲೀಸರು ರಕ್ಷಣೆ ಮಾಡಿದ್ದು, ತುಂಬಾ ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದ ಎಂದು ತಿಳಿದುಬಂದಿದೆ.








