ವಿಶ್ವ ಸಿನಿರಂಗದ ನೊಬೆಲ್ ಎಂದೇ ಖ್ಯಾತಿಯಾದ ಆಸ್ಕರ್ ಅವಾರ್ಡ್ ಚಿತ್ರ ಸಾಧಕರ ಪಾಲಾಗಿದೆ. ಅಮೆರಿಕಾದ ಕ್ಯಾನಿಫೋರ್ನಿಯಾದಲ್ಲಿ ನಡೆದ 2020 ಆಸ್ಕರ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಜೋಕರ್ ಹಾಗೂ ಪ್ಯಾರಾಸೈಟ್ ಸಿನಿಮಾಗಳು ದಾಖಲೆ ಬರೆದಿದೆ. ವರ್ಣರಂಜಿತ ಅದ್ಧೂರಿ ಸಮಾರಂಭದಲ್ಲಿ ಚಿತ್ರರಂಗದ ಸಾಧಕರಿಗೆ 92ನೇ ಸಾಲಿನ ಆಸ್ಕರ್ ಅಕಾಡೆಮಿಯನ್ನ ನೀಡಿ ಗೌರವಿಸಲಾಯಿತು.
ಇದೇ ಮೊದಲ ಬಾರಿಗೆ ದಕ್ಷಿಣ ಕೊರಿಯಾದ ‘ಪ್ಯಾರಾಸೈಟ್’ ಸಿನಿಮಾ ನಾಲ್ಕು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಹೊಸ ದಾಖಲೆ ಬರೆದಿದೆ. ಬೊಂಗ್ ಜೂನ್ ನಿರ್ದೇಶನದ ‘ಪ್ಯಾರಾಸೈಟ್’ ಸಿನಿಮಾ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಮೂಲ ಚಿತ್ರಕಥೆ ಮತ್ತು ಅತ್ಯುತ್ತಮ ವಿದೇಶಿ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸಿ ನಗೆಬೀರಿದೆ. 92 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂಗ್ಲೀಷೇತರ ಸಿನಿಮಾವೊಂದು 4 ಪ್ರಶಸ್ತಿ ಪಡೆದುಕೊಂಡಿರುವುದು ಏಷ್ಯಾ ಖಂಡಕ್ಕೆ ಹೆಮ್ಮೆ ಎನಿಸಿದೆ.
ಇನ್ನ, ಡಾರ್ಕ್ ನೈಟ್ ಸಿನಿಮಾದ ಜೋಕರ್ ಪಾತ್ರ ಯಾರಿಗೆ ತಾನೆಗೊತ್ತಿಲ್ಲ ಹೇಳಿ, ಹೀಲ್ ಲೆಡ್ಜೆರ್ ಅವರ ಮನೋಜ್ಞ ಅಭಿನಯ ಸಿನಿರಸಿಕರ ಮನದಲ್ಲಿ ಇಂದಿಗೂ ಹಚ್ಚಿಳಿದಿದೆ. ಅಂತಹದ್ದೇ ಕಳೆದ ವರ್ಷ ಬಿಡುಗಡೆಗೊಂಡಿದ್ದ ಜೋಕರ್ ಸಿನಿಮಾ ಸಾಕಷ್ಟು ಖ್ಯಾತಿ ಗಳಿಸಿತ್ತು. ಇದೀಗಾ ಜೋಕರ್ ಸಿನಿಮಾ ಅತ್ಯೂತ್ತಮ ನಟ ಹಾಗೂ ಅತ್ಯೂತ್ತಮ ಹಿನ್ನೆಲೆ ಸಂಗೀತಗೆ ಆಸ್ಕರ್ ಒಲಿದಿದೆ. ಅತ್ಯುತ್ತಮ ನಟನೆಗಾಗಿ ಜೋವಾಕ್ವಿನ್ ಫೀನಿಕ್ಸ್ ಆಸ್ಕರ್ ಪ್ರಶಸ್ತಿ ಗಳಿಸಿದ್ದಾರೆ. 45 ವರ್ಷದ ನಟ ಫೀನಿಕ್ಸ್ ಅವರಿಗೆ ಈಗಾಗಲೇ ಬಾಫ್ಟಾ, ಗೋಲ್ಡನ್ ಗ್ಲೋಬ್, ಮತ್ತು ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಅವಾರ್ಡ್ ಪುರಸ್ಕಾರಗಳು ಲಭಿಸಿರುವುದು ಮತ್ತೊಂದು ವಿಶೇಷವಾಗಿದೆ.
ಜ್ಯೂಡಿ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಪ್ರತಿಭಾವಂತ ತಾರೆ ರೀನೀ ಝೆಲ್ವಗೆರ್ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದ್ದಾರೆ. ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್ ಸಿನಿಮಾದ ಶ್ರೇಷ್ಠ ನಟನೆಗಾಗಿ ಹಾಲಿವುಡ್ ಖ್ಯಾತ ನಟ ಬ್ರಾಡ್ ಪಿಟ್ ಅವರಿಗೆ ಅತ್ಯುತ್ತಮ ಪೋಷಕ ಪ್ರಶಸ್ತಿ ಲಭಿಸಿದೆ. ಇದೇ ವೇಳೆ ಯುದ್ಧ ಕುರಿತ 1917 ಸಿನಿಮಾಗೆ ಅತ್ಯುತ್ತಮ ದೃಶ್ಯ ಪರಿಣಾಮ, ಅತ್ಯುತ್ತಮ ಸೌಂಡ್ ಮಿಕ್ಸಿಂಗ್ ಮತ್ತು ಅತ್ಯುತ್ತಮ ಛಾಯಾಚಿತ್ರ ವಿಬಾಗಗಳಲ್ಲಿ ಮೂರು ಆಸ್ಕರ್ ಪ್ರಶಸ್ತಿಗಳು ದೊರೆತಿವೆ.
ಇನ್ನ, ಈ ಬಾರಿ ಅಸ್ಕರ್ ಅವಾರ್ಡ್ ಪ್ರಶಸ್ತಿ ಬಾಚಿಕೊಂಡ ಸಿನಿಮಾಗಳನ್ನ ನೋಡೋದಾದ್ರೆ, ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನ ಮ್ಯಾರೇಜ್ ಪಾರ್ಟಿ ಚಿತ್ರದ ಲೌರಾ ಡೆರ್ನ್ ಮುಡಿಗೇರಿಸಿಕೊಂಡಿದ್ದಾರೆ. ಹಾಗೇ ಅತ್ಯುತ್ತಮ ಅನಿಮೇಷನ್ ಚಿತ ಪ್ರಶಸ್ತಿಯನ್ನ-ಟಾಯ್ ಸ್ಟೋರಿ-4, ಅತ್ಯುತ್ತಮ ಅನಿಮೇಷನ್ ಕಿರು ಚಿತ್ರ – ಹೇರ್ ಲವ್, ಅತ್ಯುತ್ತಮ ಮೂಲ ಚಿತ್ರಕಥೆ – ಪ್ಯಾರಾಸೈಟ್, ಅತ್ಯುತ್ತಮ ಅಳವಡಿತ ಚಿತ್ರಕಥೆ ಜೊಜೊ ರಾಬಿಟ್, ಅತ್ಯುತ್ತಮ ನೇರ ಕ್ರಿಯಾ ಕಿರುಚಿತ್ರ – ದಿ ನೈಬರರ್ಸ್ ವಿಂಡೋ, ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್, ಅತ್ಯುತ್ತಮ ವಸ್ತ್ರ ವಿನ್ಯಾಸ – ಲಿಟ್ಲ್ ವುಮೆನ್, ಅತ್ಯುತ್ತಮ ಸಾಕ್ಷ್ಯ ಚಿತ್ರ ಅಮೆರಿಕನ್ ಫ್ಯಾಕ್ಟರಿ, ಅತ್ಯುತ್ತಮ ಕಿರು ಸಾಕ್ಷ್ಯ ಚಿತ್ರ – ಲನಿರ್ಂಗ್ ಟು ಸ್ಕೇಟ್ ಬೋರ್ಡ್ ಇನ್ ಎ ವಾರ್ ಝೋನ್(ಇಫ್ ಯು ಆರ್ ಎ ಗರ್ಲ್), ಅತ್ಯುತ್ತಮ ಶಬ್ಧ ಸಂಕಲನ – ಪೋರ್ಡ್ ವರ್ಸಸ್ ಫೆರಾರಿ, ಅತ್ಯುತ್ತಮ ಮೇಕಪ್ ಮತ್ತು ಕೇಶ ವಿನ್ಯಾಸ – ಬಾಂಬ್ ಶೆಲ್ ಹಾಗೂ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನ ರಾಕೆಟ್ ಮ್ಯಾನ್ ಚಿತ್ರದ ಐ ಯಾಮ್ ಗೋನಾ ಲವ್ ಮಿ ಎಗೈನ್ ಬಾಚಿಕೊಂಡಿದೆ.