2020ರ ಯುಎಸ್ ಓಪನ್ ಟೂರ್ನಿಯ ಮಹಿಳಾ ಸಿಂಗಲ್ಸ್ ನಲ್ಲಿ ಗ್ರ್ಯಾಂಡ್ ಸ್ಲ್ಯಾಂ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ ಅವರು 7-5, 6-3ರಿಂದ ಕ್ರಿಸ್ಟೀ ಆಹ್ನ್ ಅವರನ್ನು ಪರಾಭವಗೊಳಿಸಿದ್ರು. ಪ್ರೇಕ್ಷಕರಿಲ್ಲದೆ ನಡೆಯುತ್ತಿರುವ ಯುಎಸ್ ಓಪನ್ ಟೂರ್ನಿಯನ್ನು ಜೈವಿಕ ಸುರಕ್ಷತೆ ಮತ್ತು ಕೋವಿಡ್ ಮಾರ್ಗ ಸೂಚಿಯ ಪ್ರಕಾರವೇ ನಡೆಸಲಾಗುತ್ತಿದೆ.
38ರ ಹರೆಯದ ಸೆರೆನಾ ವಿಲಿಯಮ್ಸ್ ಅವರು ದಾಖಲೆಯ 24ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಪಂದ್ಯದ ಆರಂಭದಲ್ಲಿ ಸೆರೆನಾ ವಿಲಿಯಮ್ಸ್ ಅವರು ಸ್ವಲ್ಪ ಮಟ್ಟಿನ ಒತ್ತಡಕ್ಕೆ ಸಿಲುಕಿದ್ರು. ಆನಂತರ ಪಂದ್ಯದ ಮೇಲೆ ಹಿಡಿತ ಸಾಧಿಸಿಕೊಂಡು ಎರಡು ಸೆಟ್ ಗಳಲ್ಲಿ ಪಂದ್ಯವನ್ನು ಮುಗಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ್ರು.
ವೀನಸ್ ವಿಲಿಯಮ್ಸ್ ಗೆ ಸೋಲು
ಇನ್ನೊಂದು ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ ಅಕ್ಕ ವೀನಸ್ ವಿಲಿಯಮ್ಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದಾರೆ. ಎರಡು ಬಾರಿ ಯುಎಸ್ ಓಪನ್ ಚಾಂಪಿಯನ್ ಆಗಿರುವ ವೀನಸ್ ವಿಲಿಯಮ್ಸ್ ಟೂರ್ನಿಯಿಂದ ಮೊದಲ ಬಾರಿ ನಿರ್ಗಮಿಸಿದ್ದಾರೆ. ಮೊದಲ ಸುತ್ತಿನಲ್ಲಿ ವೀನಸ್ ವಿಲಿಯಮ್ಸ್ ಅವರು 3-6, 5-7ರಿಂದ ಚೆಕ್ ರಿಪಬ್ಲಿಕ್ ನ ಕರೋಲಿನಾ ಮುಚೊವಾ ವಿರುದ್ಧ ಸೋಲು ಅನುಭವಿಸಿದ್ರು.
ಇನ್ನು ಸ್ಪೇನ್ನ ಗ್ಯಾರ್ಬಿನ್ ಮುಗುರುಝಾ ಅವರು 6-4, 6-4ರಿಂದ ಜಪಾನ್ ನ ನಾವೊ ಹಿಬಿನೊ ಅವರನ್ನು ಸೋಲಿಸಿ ಎರಡನೇ ಸುತ್ತು ಪ್ರವೇಶಿಸಿದ್ರು. ಹಾಗೇ ಬೆಲ್ಜಿಯಂನ 16ನೇ ಶ್ರೇಯಾಂಕಿತೆ ಎಲಿಸೆ ಮಾರ್ಟೆನ್ಸ್ ಅವರು 6-2, 6-2ರಿಂದ ಜರ್ಮನಿಯ ಲೌರಾ ಸೆಗೆಮ್ಮಂಡ್ ಅವರನ್ನು ಸುಲಭವಾಗಿ ಸೋಲಿಸಿ ಎರಡನೇ ಹಂತ ಪ್ರವೇಶಿಸಿದ್ರು.
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.