ಪಿತೃ ಪಕ್ಷ ಅಥವಾ ಶ್ರಾದ್ಧ ಎಂದರೆ ಹಿಂದೂಗಳು ತಮ್ಮ ಪೂರ್ವಜರನ್ನು ಸ್ಮರಿಸಲು ಇರುವ 15 ದಿನಗಳ ಆಚರಣೆಯಾಗಿದೆ. ಈ 15 ದಿನಗಳ ಅವಧಿಯಲ್ಲಿ ಒಂದು ದಿನ ಮಕ್ಕಳು ಪಿತೃಲೋಕದಲ್ಲಿರುವ ಪೂರ್ವಜರಿಗೆ ಶ್ರಾದ್ಧವನ್ನು ಮಾಡುತ್ತಾರೆ. ಸ್ವರ್ಗ ಮತ್ತು ಭೂಮಿಯ ನಡುವಿನ ಕ್ಷೇತ್ರವನ್ನು ಪಿತೃಲೋಕ ಎಂದು ಕರೆಯಲಾಗುತ್ತದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಈ ವರ್ಷದ ಪಿತೃ ಪಕ್ಷದ ದಿನಾಂಕ ಏನು?
ಹಿಂದೂ ಕ್ಯಾಲೆಂಡರ್ ಪ್ರಕಾರ, ಅಶ್ವಿನಿ ಮಾಸದ ಕೃಷ್ಣ ಪಕ್ಷವನ್ನು ಪಿತೃ ಪಕ್ಷ ಎಂದು ಕರೆಯಲಾಗುತ್ತದೆ. ಪಿತೃ ಪಕ್ಷವು ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಿಂದ ಪ್ರಾರಂಭವಾಗಿ ಅಶ್ವಿನಿ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯವರೆಗೆ ಮುಂದುವರಿಯುತ್ತದೆ. ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್ 29 ರಂದು ಆರಂಭವಾಗಲಿದ್ದು, ಅಕ್ಟೋಬರ್ 16 ರಂದು ಮುಕ್ತಾಯವಾಗುತ್ತದೆ. ಈ ಅವಧಿಯಲ್ಲಿ ಶುಭಕಾರ್ಯಗಳನ್ನು ಮಾಡಲಾಗುವುದಿಲ್ಲ.
ಯಾರು ಯಾವಾಗ ಶ್ರಾದ್ಧ ಮಾಡಬೇಕು?
ಶುಕ್ಲ ಪಕ್ಷದ ಹುಣ್ಣಿಮೆಯಿಂದ ಕೃಷ್ಣ ಪಕ್ಷದ ಅಮಾವಾಸ್ಯೆಯ ವರೆಗೆ 15 ದಿನಗಳ ಪೈಕಿ ಯಾವ ದಿನವಾದರೂ ಶ್ರಾದ್ಧ ಮಾಡಬಹುದು. ಆದರೆ ಶಾಸ್ತ್ರಗಳ ಪ್ರಕಾರ, ಯಾವುದೇ ತಿಂಗಳ ಶುಕ್ಲ ಪಕ್ಷ ಅಥವಾ ಕೃಷ್ಣ ಪಕ್ಷದ ದಿನಾಂಕದಂದು ಮರಣ ಹೊಂದಿದ ವ್ಯಕ್ತಿಗಳ ಶ್ರಾದ್ಧ ಕರ್ಮವನ್ನು ಪಿತೃ ಪಕ್ಷದ ಅದೇ ದಿನಾಂಕದಂದು ಮಾಡಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಪೂರ್ವಜರ ಮರಣದ ದಿನಾಂಕವನ್ನು ತಿಳಿದಿಲ್ಲದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ, ಈ ಪೂರ್ವಜರ ಶ್ರಾದ್ಧ ಕರ್ಮವನ್ನು ಅಶ್ವಿನಿ ಅಮವಾಸ್ಯೆಯಂದು ಮಾಡಬಹುದು ಎಂದು ಶಾಸ್ತ್ರಗಳಲ್ಲಿ ನೀಡಲಾಗಿದೆ. ಇದಲ್ಲದೇ ಅಪಘಾತಕ್ಕೀಡಾದವರಿಗೆ ಚತುರ್ದಶಿ ತಿಥಿಯಂದು ಶ್ರಾದ್ಧವನ್ನು ಮಾಡಬಹುದು.
ಪಿತೃ ಪಕ್ಷದ ಆಚರಣೆ ಮತ್ತು ಮಹತ್ವ
ಪಿತೃ ಪಕ್ಷ ಆಚರಿಸುವ ದಿನದಂದು ಕುಟುಂಬದ ಹಿರಿಯ ಮಗ ಅಥವಾ ಇತರೆ ಯಾರಾದರೂ ಸದಸ್ಯರು ಪುಣ್ಯ ಸ್ನಾನ ಮಾಡಿ, ಶುಭ್ರವಾದ ಬಟ್ಟೆ ಧರಿಸಬೇಕು. ಪೂರ್ವಜರ ಚಿತ್ರವನ್ನು ದಕ್ಷಿಣ ದಿಕ್ಕಿನಲ್ಲಿ ಮರದ ಮೇಜಿನ ಮೇಲೆ ಇರಿಸಬೇಕು. ಶ್ರಾದ್ಧ ವಿಧಿಗಳಿಗಾಗಿ ಅಕ್ಕಿ ಮತ್ತು ಎಳ್ಳು ಬೀಜಗಳನ್ನು ಒಳಗೊಂಡಿರುವ ಪಿಂಡ ಹಾಗೂ ವಿವಿಧ ಬಗೆಯೆ ವಿಶೇಷ ಆಹಾರ ತಯಾರಿಸಬೇಕು. ಅದನ್ನು ಮೊದಲು ಕಾಗೆಗೆ ಅರ್ಪಿಸಲಾಗುತ್ತದೆ.
ಕಾಗೆಯನ್ನು ಪಿತೃಲೋಕದ ಪಾಲಕನಾಗಿರುವ ಯಮನ ಸಂಕೇತ ಎಂದು ನಂಬಲಾಗಿದೆ. ಕಾಗೆಗಳು ಈ ಆಹಾರ ತಿಂದರೆ ಪಿತೃಗಳು (ಮೃತಪಟ್ಟವರು/ಪೂರ್ವಜರು) ಸವಿದರು ಎಂದು ಭಾವಿಸಲಾಗುತ್ತದೆ. ಪಿತೃಗಳು ಭೂಮಿಗೆ ಬಂದು ನಮಗೆ ಆಶಿರ್ವಾದ ಮಾಡುತ್ತಾರೆ ಎಂದು ನಂಬಲಾಗಿದೆ. ನಿರ್ಗತಿಕರಿಗೆ ಮತ್ತು ಬಡವರಿಗೆ ಸಹಾಯ ಮಾಡಿದರೆ, ಆಹಾರ ದಾನ ಮಾಡಿದರೆ ಒಳಿತಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಪೂರ್ವಜರ ಅಥವಾ ಪಿತೃಗಳ ಫೋಟೋವನ್ನು ಗೋಡೆಯ ಮೇಲೆ ಅಂಟಿಸಿದರೆ ಒಳ್ಳೆಯ ಫಲಗಳು ಲಭಿಸುತ್ತದೆ. ಒಂದು ವೇಳೆ ತಪ್ಪಾದ ದಿಕ್ಕಿನಲ್ಲಿ ಫೋಟೋಗಳನ್ನು ಹಾಕಿದರೆ ಅದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗಿ ತೊಂದರೆಯನ್ನು ಸಹ ಅನುಭವಿಸಬೇಕಾಗುತ್ತದೆ. ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಪೂರ್ವಜರ ಫೋಟೋಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಫೋಟೋದಲ್ಲಿರುವ ಪೂರ್ವಜರು ಖುಷಿಯಿಂದ ನಗುನಗುತ್ತಾ ಇರುವಂತಹ ಫೋಟೋವನ್ನು ಗೋಡೆಯ ಮೇಲೆ ಹಾಕಬೇಕು. ಪೂರ್ವಜರ ಫೋಟೋ ಮುಂದೆ ನಿಂತುಕೊಂಡು ದುಃಖವನ್ನಾಗಲಿ ಅಥವಾ ಬೇಸರವನ್ನಾಗಲಿ ವ್ಯಕ್ತಪಡಿಸಬಾರದು.
ಪೂರ್ವಜರ ಫೋಟೋವನ್ನು ಯಾವುದೇ ಕಾರಣಕ್ಕೂ ದೇವರ ಕೋಣೆಯಲ್ಲಿ ಇಡಬಾರದು. ಪೂರ್ವಜರ ಅಥವಾ ಪಿತೃಗಳ ಫೋಟೋವನ್ನು ಉತ್ತರ ದಿಕ್ಕಿನಲ್ಲಿ ಹಾಕಬೇಕು. ಪಿತೃ ಪಕ್ಷದಲ್ಲಿ ಮಾಡುವ ಪ್ರತಿಯೊಂದು ಕಾರ್ಯಗಳನ್ನು ದಕ್ಷಿಣ ಮುಖವಾಗಿ ಮಾಡಬೇಕು. ಇದರ ಜೊತೆಗೆ ಮಲಗುವ ಕೋಣೆಯಲ್ಲಿ ಅಥವಾ ಅಡುಗೆ ಕೋಣೆಯಲ್ಲಿ ಪಿತೃಗಳ ಫೋಟೋವನ್ನು ಹಾಕಬಾರದು.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ .
ಖಾಯಂ ಮನೆ ವಿಳಾಸ:- ಜ್ಞಾನೇಶ್ವರ್ ರಾವ್ ತಂತ್ರಿ ಮನೆ, ಕೊಂಡಿಮುಲೆ ಹಳ್ಳಿ, ಕಟೀಲ್ ಪೋಸ್ಟ್ , ಮೂಲ್ಕಿ ತಾಲ್ಲೂಕು, ಮಂಗಳೂರು ತಪ್ಪದೆ ಕರೆ ಮಾಡಿ 85489 98564
ಪಿತೃಪಕ್ಷದ ಸಮಯದಲ್ಲಿ ಬ್ರಾಹ್ಮಣರಿಗೆ ಅನ್ನದಾನ ಮಾಡುವುದರಿಂದ ಪಿತೃ ಆತ್ಮಗಳು ಪ್ರಸನ್ನವಾಗುತ್ತವೆ ಮತ್ತು ಅವರು ಶಾಂತಿಯನ್ನು ಪಡೆಯುತ್ತಾರೆ ಮತ್ತು ಪಿತೃ ಋಣದಿಂದ ಮುಕ್ತರಾಗುತ್ತಾರೆ ಎಂದು ನಂಬಲಾಗಿದೆ. ಮಹಾಲಯ ಅಮಾವಾಸ್ಯೆ ದಿನ ಕೂಡ ಪಿಂಡದಾನ ಮಾಡುವ ಮೂಲಕ ಪಿತೃ ಪೂಜೆ ನೆರವೇರಿಸಬಹುದು.



