ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಭಕ್ತರ ದಂಡ ಹರಿದು ಬರುತ್ತಿದ್ದು, ಕೇವಲ 39 ದಿನಗಳಲ್ಲಿ ಬರೋಬ್ಬರಿ 204.30 ಕೋಟಿ ರೂ. ಆದಾಯ (Revenue) ಹರಿದು ಬಂದಿದೆ.
ಕಳೆದ ವರ್ಷಕ್ಕಿಂತ ಈ ವರ್ಷಕ್ಕೆ ಹೊಲಿಸಿದರೆ ಸುಮಾರು 18 ಕೋಟಿ ರೂ. ಆದಾಯ ಕಡಿಮೆಯಾಗಿದೆ. (Sabarimala) ದೇಗುಲದಲ್ಲಿ 41 ದಿನಗಳ ಕಾಲ ನಡೆದ ಮಂಡಲಂ-ಮಕರವಿಳಕ್ಕು (Mandalam-Makaravilakku) ಯಾತ್ರೆಯ ಮೊದಲ ಹಂತ ಮುಕ್ತಾಯವಾಗಿದೆ. ಮೊದಲ 39 ದಿನಗಳು ಅಂದರೆ ಡಿಸೆಂಬರ್ 25ರ ವರೆಗೆ ಶಬರಿಮಲೆ ಆದಾಯ 204,30,76,704 ರೂ.ಗೆ ತಲುಪಿದೆ. ಆದರೆ, ಕಳೆದ ವರ್ಷಕ್ಕಿಂತಲೂ ಆದಾಯ ಕುಸಿತ ಕಂಡಿದೆ. ಆದರೆ, ಭಕ್ತರ ಸಂಖ್ಯೆ ಮಾತ್ರ ಹಿಂದಿನ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಿದೆ.
ತಿರುವಾಂಕೂರು ದೇವಸ್ವಂ ಬೋರ್ಡ್ (TDB) ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಈ ಕುರಿತು ಮಾತನಾಡಿ, ಈ ಬಾರಿ 222,98,70,250 (222.98 ಕೋಟಿ ರೂ.) ಆದಾಯ ಬಂದಿದ್ದು, ಈ ಬಾರಿ 18,67,93, 546 ರೂ. ಇಳಿಕೆಯಾಗಿದೆ. ನಾಣ್ಯಗಳನ್ನು ಸೇರಿಸಿದ ನಂತರ ಆದಾಯ ಹೆಚ್ಚಳವಾಗುವ ಸಾಧ್ಯತೆ ದೆ ಎಂದು ಹೇಳಿದ್ದಾರೆ.