ತಂದೆ ಹೇರ್ ಕಟ್ ಮಾಡಿಸಿಕೊಳ್ಳುವಂತೆ ಗದರಿದ್ದಕ್ಕೆ ಮಗ ಹೀಗಾ ಮಾಡೋದು..!
ತಮಿಳುನಾಡು : ಸಹಜವಾಗಿ ಉದ್ದ ಕೂದಲು ಬೆಳೆಸಿದ್ರೆ ಹುಡುಗರಿಗೆ ಮನೆಗಳಲ್ಲಿ ಕಟಿಂಗ್ ಮಾಡಿಸಿಕೋ ಅಂತ ಬೈಯೋದು ಕಾಮನ್. ಆದ್ರೆ ಇಲ್ಲೊಬ್ಬ ಹುಡುಗ ಚಿಕ್ಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹೌದು ತಂದೆ ಕ್ಷೌರ ಮಾಡಿಸಿಕೊಳ್ಳುವಂತೆ ಗದರಿಸಿದರು ಎಂಬ ಕ್ಷುಲ್ಲಕ ಕಾರಣಕ್ಕೆ 20 ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಈ ಯುವಕ ಕಳೆದ 1 ವರ್ಷದಿಂದ ತನ್ನ ಕೂದಲನ್ನು ಬೆಳೆಸುತ್ತಿದ್ದ. ಹೀಗಾಗಿ ಕೂದಲು ಕಟ್ ಮಾಡಿಸಿಕೋ ಎಂದು ತಂದೆ ಹೇಳಿದ್ದಾರೆ. ಆದ್ರೆ ಯುವಕ ಮಾತು ಕೇಳಿರಲಿಲ್ಲ. ಹೀಗಾಗಿ ಆತನ ಮೇಲೆ ರೇಗಾಡಿದ್ದಾರೆ. ಇದರಿಂದ ಮನನೊಂದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಲಾರಿಯ ಇಂಜಿನ್ ಗೆ ತಗುಲಿದ ಬೆಂಕಿ : ಲಾರಿಯಲ್ಲೇ ಚಾಲಕ ಸಜೀವ ದಹನ
ಪೊಲೀಸ್ ವಾಹನದ ಮೇಲೆ ಡ್ರಗ್ ಗ್ಯಾಂಗ್ ಗುಂಡಿನ ದಾಳಿ : 13 ಅಧಿಕಾರಿಗಳ ಹತ್ಯೆ..!