ಧಾರವಾಡ : ಲಾಕ್ ಡೌನ್ ಪರಿಣಾಮವಾಗಿ ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡಿದ್ದರಿಂದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ವಾಕರಸಾಸಂ ಹುಬ್ಬಳ್ಳಿ ಸಾರಿಗೆ ವಿಭಾಗಕ್ಕೆ 23 ಕೋಟಿ ಆದಾಯ ನಷ್ಟ. ಹುಬ್ಬಳ್ಳಿ ವಿಭಾಗದಲ್ಲಿ ನಾಲ್ಕು ಬಸ್ ಘಟಕಗಳಲ್ಲಿ ಒಟ್ಟು 462 ಬಸ್ಸುಗಳು ಹಾಗೂ 2173 ಸಿಬ್ಬಂದಿಗಳು.
ವಿಭಾಗದ ಬಸ್ಸುಗಳು ಪ್ರತಿದಿನ 1.90 ಲಕ್ಷ ಕಿಲೊಮೀಟರುಗಳಷ್ಟು ಕ್ರಮಿಸಿ ವಿವಿಧ ರಿಯಾಯಿತಿ ಪಾಸು ಪ್ರಯಾಣಿಕರು ಸೇರಿದಂತೆ 1.45 ಲಕ್ಷಗಳಷ್ಟು ಸಾರ್ವಜನಿಕ ಪ್ರಯಾಣಿಕರು ಹಾಗೂ 45 ಸಾವಿರಗಳಷ್ಟು ವಿದ್ಯಾರ್ಥಿಗಳಿಗೆ ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಸಂಸ್ಥೆಗೆ 45 ರಿಂದ 50 ಲಕ್ಷ ರೂ. ಸಾರಿಗೆ ಆದಾಯ ಸಂಗ್ರಹಣೆ.
ಮಾರ್ಚ ತಿಂಗಳಲ್ಲಿ 9 ರವರೆಗೆ ಬಸ್ಸುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿರಲಿಲ್ಲವಾದ್ದರಿಂದ ಆದಾಯ ಸಂಗ್ರಹಣೆ ನಿರೀಕ್ಷೆಯಂತಿತ್ತು ನಂತರದಲ್ಲಿ ಕೊರೊನಾ ಸುದ್ದಿ ಮತ್ತು ಹೋಳಿ ಕಾರಣ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಕುಸಿತ 22ರವರೆಗೆ ಬಸ್ಸುಗಳ ಸಂಖ್ಯೆಯೂ ಸಹ ದಿನದಿಂದ ದಿನಕ್ಕೆ ಕಡಿಮೆ.
23 ರಿಂದ ಶೂನ್ಯಕ್ಕಿಳಿದ ಬಸ್ ಸಂಚಾರ ಮಾರ್ಚ್ ತಿಗಳಲ್ಲಿ ಭಾಗಶಃ ಬಸ್ ಕಾರ್ಯಾಚರಣೆಯಾಗಿದ್ದರಿಂದ ನಿರೀಕ್ಷಿತ ಸಾರಿಗೆ ಆದಾಯದಲ್ಲಿ 5.50 ಕೋಟಿ ಗಳಷ್ಟು ಕೊರತೆ. ಏಪ್ರಿಲ್ ತಿಂಗಳಲ್ಲಿ ಯಾವುದೇ ಬಸ್ಸು ರಸ್ತೆಗಿಳಿಯದಿರುವುದರಿಂದಾಗಿ ರೂ.17.50 ಕೋಟಿ ಆದಾಯ ನಷ್ಟ. ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ಪ್ರಕಟಣೆ.