ಡಿ ಬಾಸ್ ದರ್ಶನ್ : 24 ವರ್ಷಗಳ ಬಾಸಿಸಂ
ದರ್ಶನ್ ತೂಗುದೀಪ.. ಕನ್ನಡ ಚಿತ್ರರಂಗದ ಖ್ಯಾತ ನಟ ತೂಗುದೀಪ ಶ್ರೀನಿವಾಸ್ ಅವರ ಪುತ್ರ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅಪ್ಪ ದೊಡ್ಡ ನಟನಾಗಿದ್ರೂ ಮಗ ದರ್ಶನ್ ಅಷ್ಟೊಂದು ಸುಲಭವಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಲಿಲ್ಲ. ತೂಗುದೀಪ ಶ್ರೀನಿವಾಸ್ ಅವರ ಮಗನಾಗಿದ್ರೂ ತುಂಬಾನೇ ಕಷ್ಟಪಟ್ಟಿದ್ದರು. ತನ್ನ ಸ್ವ ಪ್ರತಿಭೆ, ಸಾಮಥ್ರ್ಯದಿಂದಲೇ ಕನ್ನಡ ಚಿತ್ರದ ರಂಗದ ಚಾಲೆಂಜಿಂಗ್ ಸ್ಟಾರ್ ಆಗಿ ಮೆರೆಯುತ್ತಿರುವ ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು 24 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಅವರ ಅಪಾರ ಸಂಖ್ಯೆಯ ಅಭಿಮಾನಿಗಳ ಬಳಗ ಡಿ ಬಾಸ್: 24 ವರ್ಷಗಳ ಬಾಸಿಸಂ ಎಂಬ ಹೆಸರಿನಲ್ಲಿ ಸೋಶಿಯಲ್ ಮೀಡಿಯಾಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಆಲ್ಲದೆ ಕಾಮನ್ ಡಿಪಿ ಹಾಕಿ ಸಂಭ್ರಮಿಸುತ್ತಿದ್ದಾರೆ.
ತನ್ನ ಅಭಿಮಾನಿ ಬಳಗ ಸೇರಿದಂತೆ ಚಿತ್ರರಂಗದ ಅನೇಕ ಕಲಾವಿದರಿಗೆ ಸಹಾಯ ಮಾಡಿರುವ ದರ್ಶನ್, ದಾನದಲ್ಲಿ ಕರ್ಣ.. ಹೃದಯವಂತಿಕೆಯಲ್ಲಿ ಧರ್ಮರಾಯ.. ಛಲದಲ್ಲಿ ದುಯೋಧನ.. ಹಾಗೇ ಶ್ರೀ ಕೃಷ್ಣನಂತಹ ಬುದ್ಧಿಯೂ ಇದೆ. ಅರ್ಜುನನಂತಹ ಪ್ರತಿಭೆ-ಸಾಮಥ್ರ್ಯವೂ ಇದೆ. ಆದ್ರೆ ಖಂಡಿತ ಶ್ರೀರಾಮಚಂದ್ರನಲ್ಲ. ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್ ನಂತಹ ಮೇರು ನಟರನ್ನು ಕಂಡಿರುವ ಕನ್ನಡ ಚಿತ್ರರಂಗದಲ್ಲಿ ದರ್ಶನ್ ತೂಗುದೀಪ ತಮ್ಮದೇ ಆದ ಛಾಪು ಮೂಡಿಸಿದ್ದರು. ಶಿವರಾಜ್ ಕುಮಾರ್, ಸುದೀಪ್, ಪುನೀತ್ ರಾಜ್ ಕುಮಾರ್, ಯಶ್ ಮೊದಲಾದ ಮುಂಚೂಣಿಯ ನಟರೊಂದಿಗೆ ಸ್ಪರ್ಧೆ ಮಾಡಿ ಚಾಲೆಂಜಿಂಗ್ ಸ್ಟಾರ್ ಆಗಿ ರೂಪುಗೊಂಡವರು ನಟ ದರ್ಶನ್ ತೂಗುದೀಪ. ಅಷ್ಟೇ ಅಲ್ಲ, ಸಿನಿಮಾ ಜೊತೆಗೆ ರೈತರ ಪಾಲಿಗೂ ಮಾದರಿಯಾಗಿದ್ದಾರೆ. ವನ್ಯ ಜೀವಿ ಸಂಕ್ಷರಣೆಯಲ್ಲೂ ದರ್ಶನ್ ಒಂದು ಹೆಜ್ಜೆ ಮುಂದಿದ್ದಾರೆ.
ಇನ್ನು ಕನ್ನಡ ಚಿತ್ರರಂಗಕ್ಕೆ ಬರುವುದಕ್ಕಿಂತ ಮುನ್ನ ದರ್ಶನ್ ಎಷ್ಟು ಕಷ್ಟ ಪಟ್ಟಿದ್ದರು, ಎಷ್ಟು ಸಂಕಷ್ಟ ಅನುಭವಿಸಿದ್ದರು, ಒಂದೊಂದು ರೂಪಾಯಿ ಸೇರಿಸಲು ಏನೇನು ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. 1997ರಲ್ಲಿ ಮಹಾಭಾರತ, ದೇವರ ಮಗ, ತಮಿಳಿನ ವಲ್ಲರಸು, ಎಲ್ಲರ ಮನೆ ದೋಸೆನು, ಮಿಸ್ಟರ್ ಹರಿಶ್ಚಂದ್ರ, ಭೂತಯ್ಯನ ಮಕ್ಕಳು ಮೊದಲ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು ದರ್ಶನ್ ತೂಗೂದೀಪ.
ಆದ್ರೆ 2002ರಲ್ಲಿ ಮೆಜೆಸ್ಟಿಕ್ ಚಿತ್ರದಲ್ಲಿ ದಾಸನಾಗಿ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿಕೊಟ್ಟ ದರ್ಶನ್ ನಂತ್ರ ಧೃವನಾಗಿ ಕನ್ನಡ ಚಿತ್ರರಂಗದ ಬೆಳ್ಳಿಪರದೆಯ ಮೇಲೆ ರಾರಾಜಿಸಿದ್ರು. ಆದ್ರೆ ನೀನಗೋಸ್ಕರ- ಕಿಟ್ಟಿ ಚಿತ್ರಗಳ ಮೂಲಕ ಕಾಣಿಸಿಕೊಂಡ್ರೂ ಸ್ಯಾಂಡಲ್ ವುಡ್ ನಲ್ಲಿ ತಳವೂರಲು ಸಾಧ್ಯವಾಗಲಿಲ್ಲ. ಆಗ ಪ್ರೇಮ್ ನಿದೇರ್ಶನದಲ್ಲಿ ಮೂಡಿ ಬಂದ ಕರಿಯ ಚಿತ್ರ ದರ್ಶನ್ ನೇಮ್ ಮತ್ತು ಫೇಮ್ ಅನ್ನು ತಂದುಕೊಟ್ಟಿತ್ತು. ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡ ದರ್ಶನ್ ಗೆ ಕರಿಯ ಸಿನಿಮಾದ ಯಶಸ್ಸು ದರ್ಶನ್ ಗೆ ನಿರ್ಮಾಪಕರು ಮನೆ ಬಾಗಿಲಿಗೆ ಬರುವಂತೆ ಮಾಡಿತ್ತು.
ಕರಿಯ ಚಿತ್ರದ ಯಶಸ್ಸಿನ ನಂತರ “ಲಾಲಿ ಹಾಡು” ಹಾಡುತ್ತಾ, ನೀನಂದ್ರೆ ಇಷ್ಟ ಅಂತ ಹೇಳುತ್ತಾ, ಕುಶಲವೇ ಕ್ಷೇಮವೇ ಎಂದು ಕೇಳುತ್ತಾ, “ಲಂಕೇಶ್ ಪತ್ರಿಕೆ”ಯಲ್ಲಿ ಬರೆಯುತ್ತಾ, ನೆಲಕಚ್ಚಿದ್ದ ದರ್ಶನ್ ಗೆ ಮತ್ತೆ ಮರುಜೀವ ನೀಡಿದ್ದು ನಮ್ಮ ಪ್ರೀತಿಯ ರಾಮು ಚಿತ್ರ. ನಮ್ಮ ಪ್ರೀತಿಯ ರಾಮು ಅಷ್ಟೇನೂ ಯಶ ಸಾಧಿಸದಿದ್ರೂ ದರ್ಶನ ಅಭಿನಯ ಮಾತ್ರ ಅದ್ಭುತವಾಗಿತ್ತು.
ಈ ನಡುವೆ, ಇಂದ್ರಜಿತ್ ಲಂಕೇಶ್ ನಿರ್ದೇಶನದ ಲಂಕೇಶ್ ಪತ್ರಿಕೆ ಚಿತ್ರದ ಬಳಿಕ ಮೊನಾಲಿಸಾ ಚಿತ್ರದಲ್ಲೂ ಆತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ದರ್ಶನ್. ನಂತರ ಕನ್ನಡ ಚಿತ್ರರಂಗಕ್ಕೆ ದಾಸನಾಗಿ ಮರುಜೀವ ಪಡೆದ ದರ್ಶನ್ ಆಗಲೇ ಯಶಸ್ಸಿನ ಉತ್ತುಂಗಕ್ಕೇರಿದ್ದರು.
ದಾಸ ಚಿತ್ರದ ಯಶಸ್ಸಿನ ನಂತರ ದರ್ಶನ್ ಕೂಡ ಹಿಂತಿರುಗಿ ನೊಡಲೇಇಲ್ಲ. ಸೂರ್ಯನಾಗಿ ಅಣ್ಣಾವು ಚಿತ್ರದಲ್ಲಿ ಕಾಣಿಸಿಕೊಂಡ ದರ್ಶನ್, ಧರ್ಮ, ದರ್ಶನ್ ಚಿತ್ರಗಳಲ್ಲೂ ಮಿಂಚು ಹರಿಸಿದ್ದರು. ಭಗವಾನ್ ಚಿತ್ರದಲ್ಲಿ ಭಾಗಿಯಾಗಿ, ಕಲಾಸಿಪಾಳ್ಯ ಚಿತ್ರದಲ್ಲಿ ಕೆಂಚನಾಗಿ ಸ್ಯಾಂಡಲ್ ವುಡ್ ನಲ್ಲಿ ಧೂಳು ಎಬ್ಬಿಸಿದ್ದರು ನಟ ದರ್ಶನ್.
ಹಾಗೇ, ಅಯ್ಯ ಚಿತ್ರದಲ್ಲಿ ಅಯ್ಯನಾಗಿ, ಶಾಸ್ತ್ರಿ ಚಿತ್ರದಲ್ಲಿ ರಾಮ ಶಾಸ್ತ್ರಿಯಾಗಿ, ಸ್ವಾಮಿ ಚಿತ್ರದಲ್ಲಿ ಖಡಕ್ ಪೆÇಲೀಸ್ ಅಧಿಕಾರಿಯಾಗಿ ನಟಿಸಿದ್ದ ದರ್ಶಶ್ ಗೆ ಮಂಡ್ಯ ಚಿತ್ರದಲ್ಲಿ ರಾಧಿಕಾ ಮತ್ತು ರಕ್ಷಿತಾ ನಾಯಕಿಯಾಗಿದ್ದರು. ಬಳಿಕ ಜಗ್ಗಿಯಾಗಿ ಸುಂಟರಗಾಳಿ ಚಿತ್ರದಲ್ಲಿ ಬಿರುಗಾಳಿ ಎಬ್ಬಿಸಿದ್ದರು. ಅಷ್ಟೇ ಅಲ್ಲ, ರಕ್ಷಿತಾ ಮತ್ತು ದರ್ಶನ್ ಕನ್ನಡ ಚಿತ್ರರಂಗದ ಯಶಸ್ವಿ ಜೋಡಿಯಾಗಿದ್ದರು.
ಇದಾದ ಬಳಿಕ ದತ್ತ ಚಿತ್ರದಲ್ಲಿ ದತ್ತನಾಗಿ ರಮ್ಯಾ ಜೊತೆ ಕಾಣಿಸಿಕೊಂಡ ದರ್ಶನ್, ವೀರಭದ್ರನಾಗಿ ತಂಗಿಗಾಗಿ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.
2007ರಲ್ಲಿ ಭೂಪತಿಯಾಗಿ ಮೆರೆದಾಡಿದ್ದ ದರ್ಶನ್, ಸ್ನೇಹನಾ ಪ್ರೀತಿನಾ ಅಂತ ಹೇಳಿಕೊಂಡು, ಉಪೇಂದ್ರ ಜೊತೆಯಲ್ಲಿ ಅನಾಥ ಚಿತ್ರದಲ್ಲೂ ನಟಿಸಿದ್ದರು. ಈ ಬಂಧನ, ಇಂದ್ರ, ಅರ್ಜುನ್, ನವಗ್ರಹ, ಯೋಧ, ಅಭಯ್ ಚಿತ್ರಗಳಲ್ಲಿ ಭಿನ್ನ ಪಾತ್ರಗಳಲ್ಲಿ ನಟನೆ ಮಾಡಿದ್ದರು.
ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ದರ್ಶನ್ ನಿರ್ಮಾಪಕರ ಪಾಲಿಗೆ ಅಚ್ಚುಮೆಚ್ಚಿನ ಹೀರೋ ಆಗಿದ್ದರು. 2010ರಲ್ಲಿ ಶೌರ್ಯ ಚಿತ್ರದಲ್ಲಿ ನಟನೆ ಮಾಡಿದ್ದ ದರ್ಶನ್ 2011ರಲ್ಲಿ ತೆರೆಕಂಡ ಬಾಸ್ ಚಿತ್ರದ ನಂತರ ಅಭಿಮಾನಿಗಳ ಬಾಯಿಂದ ಡಿ ಬಾಸ್ ಅನ್ನೋ ಬಿರುದನ್ನು ಪಡೆದುಕೊಂಡ್ರು.
ಪ್ರಿನ್ಸ್ ಚಿತ್ರದಲ್ಲಿ ವಿಷ್ಣುವಾಗಿದ್ದ ದರ್ಶನ್ ಬಳಿಕ ಸಾರಥಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ನಿಜವಾದ ಸಾರಥಿಯೂ ಆಗಿದ್ದರು. ಐತಿಹಾಸಿಕ ಸಂಗೋಳ್ಳಿ ರಾಯಣ್ಣ ಚಿತ್ರದ ಮೂಲಕ ದರ್ಶನ್ ಯಾವುದೇ ಪಾತ್ರದಲ್ಲೂ ನಟಿಸಬಲ್ಲೇ ಎಂಬುದನ್ನು ಕೂಡ ಸಾಬೀತುಪಡಿಸಿದ್ದರು.
ಹಾಗೇ ಚಿಂಗಾರಿ, ಬುಲ್ ಬುಲ್ ಮಾತಾಡಕ್ಕಿಲ್ವೋ ಅಂತ ಬೃಂದಾವನಕ್ಕೆ ಕಾಲಿಟ್ಟ ದರ್ಶನ್ ಅಗ್ರಜನಾದ್ರು. ಅಂಬರೀಷ, ಮಿಸ್ಟರ್ ಐರಾವತ, ವಿರಾಟ್, ಜಗ್ಗುದಾದಾ, ಹಾಗೂ ಮುಮ್ತಾಜ್, ನಾಗರಹಾವು, ನವಗ್ರಹ, ಚೌಕಾ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡ ದರ್ಶನ್, ಚಕ್ರವರ್ತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಚಕ್ರವರ್ತಿಯಾಗಿ ಹೊಹೊಮ್ಮಿದ್ರು.
ಬಳಿಕ ತಾರಕ್, ಯಜಮಾನ ಚಿತ್ರದ ಜೊತೆಗೆ ಅಮರ್ ಚಿತ್ರದಲ್ಲಿ ಆತಿಥಿ ಪಾತ್ರ ಮಾಡಿದ್ದ ದರ್ಶನ್ ಕುರುಕ್ಷೇತ್ರ ಚಿತ್ರದಲ್ಲಿ ಒಡ್ಡೋಲಗವನ್ನೇ ನಡೆಸಿದ್ದರು. ಅಲ್ಲದೆ ಒಡೆಯ ಮತ್ತು ರಾಬರ್ಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಬಾಕ್ಸಾಫಿಸ್ ಸುಲ್ತಾನನಾಗಿದ್ರು.
ಒಂದಂತೂ ಸತ್ಯ, ದರ್ಶನ್ ಸಿನಿಮಾ ಅಂದ್ರೆ ಹಾಕಿದ ಬಂಡಾವಳ ವಾಪಸ್ ಬರುತ್ತೆ ಅನ್ನೋ ಲೆಕ್ಕಚಾರ ನಿರ್ಮಾಪಕರದ್ದು. ಹಾಗೇ ಅಭಿಮಾನಿಗಳಿಗೆ ಚಿತ್ರ ಚೆನ್ನಾಗಿರಲಿ, ಇಲ್ಲದೆ ಇರಲಿ, ದರ್ಶನ್ ನಟನೆ ತುಂಬಾ ಇಷ್ಟಪಡುತ್ತಾರೆ. ಜೊತೆಗೆ ದರ್ಶನ್ ಮೇಲಿನ ಅಭಿಮಾನ, ಪ್ರೀತಿ ಕೂಡ ಇದೆ. ಇದೇ ಕಾರಣಕ್ಕೆ ದರ್ಶನ್ ರಾಜ್ಯದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.