ಸುಯೇಜ್ ಕಾಲುವೆಯಲ್ಲಿ ಸಿಲುಕಿರುವ ಹಡಗಿನಲ್ಲಿ ಇರುವವರು ಭಾರತೀಯರು..!

1 min read

ಸುಯೇಜ್ ಕಾಲುವೆಯಲ್ಲಿ ಸಿಲುಕಿರುವ ಹಡಗಿನಲ್ಲಿ ಇರುವವರು ಭಾರತೀಯರು..!

ಈಜಿಪ್ಟ್ ನ ಸುಯೇಜ್ ಕಾಲುವೆಯಲ್ಲಿ ಅತಿದೊಡ್ಡ ಸರಕು ಸಾಗಣೆ ಹಡಗೊಂದರಲ್ಲಿ ಸಿಲುಕಿರುವ 25 ಸಿಬ್ಬಂದಿ ಭಾರತೀಯರು ಎನ್ನಲಾಗಿದೆ. ಹೌದು ಎವರ್ ಗಿವನ್‌ ಹಡಗಿನಲ್ಲಿ ಸುಯೆಜ್ ಕಾಲುವೆಯಲ್ಲಿ ಸಿಲುಕಿರುವವರು ಭಾರತೀಯರು ಎಂದು ಜಪಾನ್ ಮೂಲದ ಎವರ್ ಗಿವನ್ ಹಡಗಿನ ಮಾಲೀಕರು ತಿಳಿಸಿದ್ದಾರೆ. ಇನ್ನೂ ಕಾಲುವೆಯಲ್ಲಿ ಹಡಗು ಸಿಲುಕಿರುವುದರಿಂದ ತೈಲ ಮತ್ತು ವಿವಿಧ ಸರಕು ಕಂಟೇನರ್ ಹೊತ್ತ ಹಡಗುಗಳ ಸಂಚಾರಕ್ಕೆ ಅಡಚಣೆಯಾಗಿದೆ.

ಸದ್ಯ ಹಡಗಿನಲ್ಲಿರುವ ಎಲ್ಲ ಸಿಬ್ಬಂದಿ ಸುರಕ್ಷಿತರಾಗಿದ್ದು, ಅವರಿಗೆ ಯಾವುದೇ ತೊಂದರೆಯಾಗಿಲ್ಲ , ಕಾಲುವೆಯಲ್ಲಿ ಸಿಲುಕಿರುವ ಹಡಗನ್ನು ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಡುವ ಪ್ರಯತ್ನ ಜಾರಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ. ಬಲವಾದ ಗಾಳಿಗೆ ಸಿಲುಕಿ ಹಡಗು ಬದಿಗೆ ವಾಲಿದ್ದು, ಈ ಅವಘಡಕ್ಕೆ ಯಾವುದೇ ತಾಂತ್ರಿಕ ದೋಷ ಕಾರಣವಲ್ಲ ಎಂದು ಹಡಗಿನ ಮ್ಯಾನೇಜರ್ ತಿಳಿಸಿದ್ದಾರೆ.

ಇನಿಯನ ಜೊತೆ ಸೇರಿ ತಾಳಿಕಟ್ಟಿದವನ ಕಥೆಯನ್ನೇ ಮುಗಿಸಿದ ರಾಕ್ಷಸಿ..!

ತಲೈವಿ ಟ್ರೈಲರ್ ನಲ್ಲಿದೆ ತಮಿಳುನಾಡು ವಿಧಾನಸಭೆಯಲ್ಲಿ ನಡೆದ  ಜಯಲಲಿತಾ ಮೇಲಿನ ಹಲ್ಲೆಯ ಘಟನೆ

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd