ಮನುಷ್ಯ ಸತ್ತ ನಂತ್ರ ಪುಣ್ಯಗಳನ್ನು ಮಾಡಿದ್ರೆ ಸ್ವರ್ಗಕ್ಕೆ ಪಾಪಗಳನ್ನು ಮಾಡಿದ್ರೆ ನರಕಕ್ಕೆ ಹೋಗ್ತಾನೆ ಅನ್ನೊದನ್ನ ನಾವು ಕೇಳಿಕೊಂಡೇ ಬರ್ತಿದಿವಿ.
ನರಕ ಹೇಗಿರುತ್ತೆ. ಅಲ್ಲಿನ ಶಿಕ್ಷೆಗಳು ಯಾವ ರೀತಿ ಇರುತ್ವೆ..? ಯಾವ ಪಾಪಕ್ಕೆ ಯಾವ ಶಿಕ್ಷೆ ಅನ್ನೋದನ್ನ ಗರುಡ ಪುರಾಣದಲ್ಲಿ ವಿವರಿಸಲಾಗಿದೆ.
ಹಾಗಾದ್ರೆ ಗರುಡ ಪುರಾಣದ ಪ್ರಕಾರ ಯಾವ ಪಾಪ ಮಾಡಿದ್ರೆ ಯಾವ ರೀತಿ ಶಿಕ್ಷೆ ಇರುತ್ತೆ ಅನ್ನೋದನ್ನ ತಿಳಿಯೋಣ..
ಗರುಡ ಪುರಾಣದ ಪ್ರಕಾರ ಪಾಪಿಗಳ ಆತ್ಮ ನರಕಕ್ಕೆ ಬಂದ ಕೂಡಲೇ ಅದಕ್ಕೆ ಒಂದು ದೇಹವನ್ನ ಕೊಡ್ತಾರಂತೆ. ಆ ಶರೀರ ಸುಡುತ್ತೆ, ಶರೀರ ಅನುಭವಿಸುವ ನೋವು ಆತ್ಮಕ್ಕೆ ಗೊತ್ತಾಗುತ್ತೆ. ಆದ್ರೂ ಆ ಶರೀರ ಭಸ್ಮವಾಗದು, ಅದಕ್ಕೆ ಸಾವೂ ಇರಲ್ಲ. ಕುರಿಯನ್ನ ಬಲಿ ಕೊಡುವ ಮುನ್ನ ಅಲಂಕರಿಸಿದಂತೆ ಯಮಭಟರು ಚೆಂದವಾದ ಶರೀರವನ್ನ ಆತ್ಮಕ್ಕೆ ನೀಡ್ತಾರೆ. ಇದಾದ ಬಳಿಕ ಅಸಲಿ ಕಥೆ ಶುರುವಾಗುತ್ತೆ.
ಗರುಡ ಪುರಾಣದ ಪ್ರಕಾರ ನರಕದಲ್ಲಿ 28 ಸೆಕ್ಷನ್ ಅಂದ್ರೆ ಶಿಕ್ಷೆಗಳಿವೆ. ಅವುಗಳ ಅನುಸಾರವಾಗಿ ಪಾಪಿಗಳಿಗೆ ಶಿಕ್ಷೆ ನೀಡಲಾಗುತ್ತೆ.
ತಮಿಶ್ರಂ
ಗರುಡ ಪುರಾಣ ಪ್ರಕಾರ ತಮಿಶ್ರ ಎಂದ್ರೆ ಬೇರೆಯವರ ಸ್ವತ್ತನ್ನು ಕಿತ್ತುತಿನ್ನುವವರನ್ನು ಶಿಕ್ಷಿಸುವುದು.ಯಮಭಟರು ಪಾಪಿಗಳನ್ನು ಕಗ್ಗತ್ತಳಲ್ಲಿ ಕಾಲಪಾಶದಿಂದ ಕಟ್ಟಾಕಿ ಹೊಡೆಯುವುದು.
ಅಂದ ತಂತ್ರಸಂ
ಪತಿ-ಪತ್ನಿ ಮಕ್ಕಳನ್ನು ಹಿಂಸಿಸುವವರನ್ನು, ಅಕ್ರಮ ಸಂಬಂಧ ಇಟ್ಟಿಕೊಂಡಿರುವವನ್ನ ಇಲ್ಲಿ ಶಿಕ್ಷಿಸಲಾಗುತ್ತದೆ. ಇದರ ಶಿಕ್ಷೆ ಬಹಳ ಘೋರವಾಗಿರುತ್ತೆ. ಇಲ್ಲೂ ಯಮಭಟರು ಪಾಪಿಗಳನ್ನು ಕಗ್ಗತ್ತಳಲ್ಲಿ ಕಾಲಪಾಶದಿಂದ ಕಟ್ಟಾಕಿ ಹೊಡೆಯುವುದು. ಆದ್ರೆ ಡೋಸ್ ಹೆಚ್ಚಾಗಿರುತ್ತೆ.
ರೌರವಂ:
ಇತರರ ಆಸ್ತಿಪಾಸ್ತಿಗಳನ್ನು ಕಿತ್ತುಕೊಂಡು ಬೋಗದ ಜೀವನ ನಡೆಸುವವರು ರೌರವಂ ಅನ್ನೋ ನರಕಕ್ಕೆ ಬರ್ತಾರೆ. ಅವರಿಗೆ ಶಿಕ್ಷೆ ಬಹಳ ಕಠಿಣವಾಗಿರುತ್ತೆ. ರುರು ಅನ್ನೋ ವಿಷ ಸರ್ಪಗಳ ಮಧ್ಯೆ ಪಾಪಿಗಳನ್ನು ಬಿಡಲಾಗುತ್ತದೆ.
ಮಹಾ ರೌರವಂ
ಹಿರಿಯರ ಆಸ್ತಿಪಾಸ್ತಿಗಳನ್ನು ನಾಶ ಮಾಡುವವರನ್ನು, ಬೇರೆಯವರ ಬಗ್ಗೆ ಯೋಚಿಸದೇ ಸ್ವಾರ್ಥ ಜೀವನ ನಡೆಸುವವರನ್ನು ಇಲ್ಲಿ ಶಿಕ್ಷಿಸಲಾಗುತ್ತೆ. ಈ ಶಿಕ್ಷೆ ರೌರವಂ ರೀತಿಯಲ್ಲೇ ಇದ್ದರೂ ಒಂದು ಚೂರು ಡೋಸ್ ಜಾಸ್ತಿ ಇರುತ್ತೆ.
ಕುಂಭಿಪಾಕಂ
ಬೇಟೆಯನ್ನ ಒಂದು ಆಟ ಎಂದುಕೊಂಡು ಸಾಧುಚಂತುಗಳನ್ನು ಸಾಯಿಸಿ ಭಕ್ಷಿಸುವವರನ್ನು ಶಿಕ್ಷಿಸುವುದು. ಅನವಶ್ಯಕವಾಗಿ ಇತರರನ್ನು ಹಿಂಸಿಸುವವರು ಕುಂಭಿಪಾಕಂ ಪ್ರಕಾರ ಶಿಕ್ಷೆ ಅನುಭವಿಸುತ್ತಾರೆ. ಈ ಶಿಕ್ಷೆ ತುಂಬಾ ಭಯಂಕರವಾಗಿರುತ್ತೆ. ಕಣ ಕಣ ಎನ್ನುವ ಪಾತ್ರೆಯಲ್ಲಿ ಎಣ್ಣೆ ಸುರಿದು, ಅದನ್ನು ಧಗಧಗಿಸುವ ಬೆಂಕಿಯ ಮೇಲಿಟ್ಟು, ಕುದಿಯುವ ಎಣ್ಣೆಯಲ್ಲಿ ಪಾಪಿಗಳನ್ನು ಹಾಕುವುದು.
ಕಾಲಸೂತ್ರಂ
ಹಿರಿಯರಿಗೆ ಗೌರವ ನೀಡದವರನ್ನು ಇಲ್ಲಿ ಶಿಕ್ಷಿಸಲಾಗುತ್ತದೆ. ಕಾಲಸೂತ್ರಂನಲ್ಲಿ ಹಿರಿಯರಿಗೆ ಗೌರವ ನೀಡದ ಪಾಪಿಗಳನ್ನು ಬೆಂಕಿಗೆ ಹಾಕಿ ಸುಡುತ್ತಾರೆ.
ಅಸಿತಪತ್ರವನಂ
ಚುಚ್ಚುವ ಎಲೆಗಳಿರುವ ಚಾಟಿಯಲ್ಲಿ ಪಾಪಿಗಳನ್ನು ಹೊಡೆಯುವುದು. ಇದು ಹೇಳಿದ ಕೆಲಸವನ್ನು ಸರಿಯಾಗಿ ಮಾಡದವರಿಗೆ ನೀಡಲಾಗುತ್ತೆ.
ಸುಖರಮುಖಂ
ಜನರನ್ನು ಹಿಂಸಿಸುವ ಅಧರ್ಮಿ ನಾಯಕರನ್ನು ಇಲ್ಲಿ ಶಿಕ್ಷಿಸಲಾಗುತ್ತದೆ. ಮಡಿಕೆಗಳನ್ನು ಮಾಡಲು ಮಣ್ಣನ್ನು ಕಾಲಿನಲ್ಲಿ ತುಳಿಯುವ ರೀತಿ ಪಾಪಿಗಳನ್ನು ಇಲ್ಲಿ ತುಳಿದು ತುಳಿದು ಶಿಕ್ಷಿಸಲಾಗುತ್ತೆ.
ಅಂದಕೂಪಂ
ಒಳ್ಳೆಯವರಿಗೆ ಮೋಸ ಮಾಡುವವರಿಗೆ ಈ ಶಿಕ್ಷೆ ನೀಡಲಾಗುತ್ತೆ. ಇಲ್ಲಿ ಕ್ರೂರ ಮೃಗಗಳಿರುವ ಕತ್ತಲ ಕೋಣೆಗೆ ಪಾಪಿಯನ್ನು ತಳ್ಳಿ ಶಿಕ್ಷಿಸುವುದು.
ಕ್ರಿಮಿಭೋಜನಂ
ಅತಿಥಿಗಳನ್ನು ಅವಮಾನಿಸೋದು, ಅವರಿಗೆ ಸರಿಯಾದ ಆಹಾರ ನೀಡದೇ ಇರುವವರನ್ನು ವಿಷ ಕೀಟಗಳಿಂದ ಕಚ್ಚಿಸಿ ಶಿಕ್ಷಿಸಲಾಗುತ್ತದೆ.
ಇದು ಗರುಡ ಪುರಾಣದ ಪ್ರೇತಕಾಂಡದಲ್ಲಿ ಉಲ್ಲೇಖವಾಗಿರುವ ನರಕದ ಚಿತ್ರಣ… ಹಾಗೂ ಅಲ್ಲಿ ವಿಧಿಸುವ ಒಂದಿಷ್ಟು ಶಿಕ್ಷೆಗಳ ಮಾಹಿತಿ..