CM ಸ್ಥಾನಕ್ಕೆ 2,500 ಕೋಟಿ ಆಫರ್ – ಯುಟರ್ನ್ ಹೊಡೆದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ನಿಮ್ಮನ್ನು ಸಿಎಂ ಮಾಡುತ್ತೇವೆ 2,500 ಕೋಟಿ ರೂ. ರೆಡಿ ಮಾಡಿಟ್ಟುಕೊಳ್ಳಿ ಎಂದು ದೆಹಲಿಯಂದ ಬಂದವರು ಕೇಳಿದ್ದರು ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಯುಟರ್ನ್ ಹೊಡೆದಿದ್ದಾರೆ.
ಹಣ ಪಡೆದು ಸಿಎಂ ಸ್ಥಾನ ನೀಡುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ. ಹಣ ಪಡೆದು ಸ್ಥಾನ ನೀಡುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲಿದೆ ಎಂದು ಹೇಳುವ ಮೂಲಕ ಶಾಸಕ ಯತ್ನಾಳ್ ಯುಟರ್ನ್ ಹೊಡೆದಿದ್ದಾರೆ.
2500 ಕೋಟಿ ಹಣ ನೀಡಿದ್ರೆ ಸಿಎಂ ಮಾಡುತ್ತೇವೆ ಅನ್ನೋ ಟೀಂ ಇದೆ. ಈ ರೀತಿ ದಲ್ಲಾಳಿಗಳಿದ್ದಾರೆ. ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧವಿಲ್ಲಾ ಎಂದು ಹೇಳಿದ್ದೇನೆ. ಇಡೀ ದೇಶದಲ್ಲಿಯೇ ನಮ್ಮ ಬಿಜೆಪಿ ಹೈಕಮಾಂಡ್ ಸ್ಟ್ರಾಂಗ್ ಹೈಕಮಾಂಡ್. ನಮ್ಮಂತ ಸ್ಟ್ರಾಂಗ್ ಹೈಕಮಾಂಡ್ ಬೇರೆ ರಾಜಕೀಯ ಪಕ್ಷಗಳಲ್ಲಿ ಇಲ್ಲ ಅಂತಾ ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
1-2 ಘಟನೆ ಬಿಟ್ಟರೆ ನೂರಕ್ಕೆ ನೂರರಷ್ಟು ಅರ್ಹರಿಗೆ ಸ್ಥಾನ ನೀಡಲಾಗಿದೆ. ವರಿಷ್ಠರ ನಿರ್ಧಾರದ ಮೇಲೆಯೇ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದು ಎಂದು ತಿಳಿಸಿದ್ದಾರೆ.