ನಿಶ್ಚಯಿಸಿದ್ದ ಮದುವೆ ಕ್ಯಾನ್ಸಲ್ :ವಿವಾಹವಾಗ್ಬೇಕಿದ್ದ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ
ಆಂಧ್ರಪ್ರದೇಶದ ಯುವಕನ ಜೊತೆ ನಿಶ್ಚಯವಾಗಿದ್ದ ಮದುವೆಯನ್ನ ಯುವತಿಯ ಮನೆಯವರು ಕ್ಯಾನ್ಸಲ್ ಮಾಡಿದ್ದಕ್ಕೆ , ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರೋ ಘಟನೆ ದೊಡ್ಡಬಳ್ಳಾಪುರ ನಗರದ ಮುತ್ತೂರು ಬಳಿ ನಡೆದಿದೆ.
ಆಂಧ್ರದ ಆಂಧ್ರದ ಅನಂತಪುರ ಜಿಲ್ಲೆಯ ಧರ್ಮಾವರಂ ತಾಲೂಕಿನ ಯರಗುಂಟಪಲ್ಲಿಯ ಯುವಕನ ಮದುವೆ ಬೆಂಗಳೂರಿನ ಯುವತಿಯ ಜೊತೆ ನಿಶ್ಚಯವಾಗಿತ್ತು. ಆದರೆ, ಹುಡುಗಿ ಕುಟುಂಬದವರು ಮದುವೆ ಕ್ಯಾನ್ಸಲ್ ಮಾಡಿದ್ದಾರೆ. ಈ ವಿಷಯ ತಿಳಿದು ಮದುವೆ ನಿಶ್ಚಯವಾಗಿದ್ದ 28 ವರ್ಷದ ನಿವಾಸಿ ಹರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
Video : ರೈಲಿನಿಂದ ಆಯತಪ್ಪಿ ಬಿದ್ದ ವೃದ್ಧನ ಜೀವ ಉಳಿಸಿದ ‘ಹೀರೋಗಳು’..!
ಹುಡುಗಿಯನ್ನು ನೋಡುವ ಸಲುವಾಗಿ ಹೈದರಾಬಾದ್ನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ. ಈ ಸಮಯದಲ್ಲಿ ಹುಡುಗಿ ಕುಟುಂಬದವರು ಮದುವೆ ಕ್ಯಾನ್ಸಲ್ ಮಾಡಿರುವ ವಿಷಯ ತಿಳಿದಿದೆ.
ಬಳಿಕ ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣದಲ್ಲಿ ಇಳಿದು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








