ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ 29 ಪ್ರಾಚೀನ ವಸ್ತುಗಳು
ನವದೆಹಲಿ: ಭಾರತದ ಅತಿ ಪುರಾತನ ವಸ್ತಗಳು ಆಸ್ಟ್ರೇಲಿಯಾದಿಂದ ಭಾರಕ್ಕೆ ಮರಳಿದ್ದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಪರಿಶೀಲಸಿದ್ದಾರೆ.
9-10ನೇ ಶತಮಾನದಷ್ಟು ಐತಿಹಾಸಿಕ ಹಿನ್ನೆಲೆಯಿರುವ 29 ಪುರಾತನ ವಸ್ತುಗಳನ್ನು ಇಂದು ಆಸ್ಟ್ರೇಲಿಯಾ ಭಾರತಕ್ಕೆ ವಾಪಸ್ ಕಳುಹಿಸಿದೆ. ಈ ಪುರಾತನ ವಸ್ತುಗಳಲ್ಲಿ ಶಿವ ಹಾಗೂ ಅವನ ಶಿಷ್ಯರು, ಭಗವಾನ್ ವಿಷ್ಣು ಮತ್ತು ಅವನ ರೂಪಗಳ ಮೂರ್ತಿ ಜೈನ ಸಂಪ್ರದಾಯ, ಭಾವಚಿತ್ರಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ಹೊಂದಿವೆ.
https://twitter.com/ANI/status/1505761990341722112?ref_src=twsrc%5Etfw%7Ctwcamp%5Etweetembed%7Ctwterm%5E1505761990341722112%7Ctwgr%5E%7Ctwcon%5Es1_&ref_url=https%3A%2F%2Fwww.etvbharat.com%2Fkannada%2Fkarnataka%2Fbharat%2Fpm-inspects-29-antiquities-repatriated-to-india-from-australia%2Fka20220321120702620
ಆಸ್ಟ್ರೇಲಿಯಾದಿಂದ ಮರಳಿದ ಎಲ್ಲಾ ಪುರಾತನ ವಸ್ತುಗಳು ಮರಳು, ಅಮೃತಾಶಿಲೆ, ಕಂಚು, ಹಿತ್ತಾಳೆ, ಕಾಗದಗಳಿಂದ ರಚಿಸಲ್ಪಟ್ಟವಾಗಿದೆ. ಈ ಶಿಲ್ಪಗಳು ಮತ್ತು ವರ್ಣಚಿತ್ರಗಳು ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸುತ್ತವೆ.
ಭಾರತವು ಇತರೆ ರಾಷ್ಟ್ರಗಳಿಂದಲೂ ಹಲವಾರು ಪ್ರಾಚೀನ ವಸ್ತುಗಳನ್ನು ಮರಳಿ ತಂದಿದೆ. ಕಳೆದ ಸಪ್ಟೆಂಬರ್‍ನಲ್ಲಿ ಪ್ರಧಾನಿ ಮೋದಿ ಅವರು ಯುಎಸ್‍ನಿಂದ 157 ಕಲಾಕೃತಿಗಳು ಹಾಗೂ ಪ್ರಾಚೀನ ವಸ್ತುಗಳನ್ನು ಮರಳಿ ತಂದಿದ್ದರು.
ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾದ ಕೌಂಟರ್ ಸ್ಕಾಟ್ ಮಾರಿಸನ್ ಇಂದು ವರ್ಚುವಲ್ ಶೃಂಗಸಭೆಯನ್ನು ನಡೆಸಲಿದ್ದಾರೆ.








