ಏಕದಿನ ಸರಣಿ ಕೈವಶ ಮಾಡಿಕೊಂಡ ಇಂಗ್ಲೆಂಡ್ ಮಹಿಳಾ ತಂಡ.. ಭಾರತಕ್ಕೆ ಎರಡನೇ ಸೋಲು
ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡ ಏಕದಿನ ಸರಣಿಯನ್ನು ಕೈ ಮಾಡಿಕೊಂಡಿದೆ. ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡವನ್ನು ಐದು ವಿಕೆಟ್ ಗಳಿಂದ ಸೋಲಿಸಿದ ಇಂಗ್ಲೆಂಡ್ ತಂಡ ಈಗ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳುವತ್ತ ಚಿತ್ತವನ್ನಿಟ್ಟಿದೆ.
ಟೌಂಟನ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಭಾರತ ಮಹಿಳಾ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತ್ತು.
ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಆಕರ್ಷಕ 44 ರನ್ ಗಳಿಸಿದ್ರೆ, ಸ್ಮøತಿ ಮಂದಾನ 22 ರನ್ ಗಳಿಗೆ ಸುಸ್ತಾದ್ರು.
ಬಳಿಕ ಜೆಮಿನಾ ರೋಡ್ರಿಗಸ್ ಕೂಡ 8 ರನ್ ಗೆ ಸೀಮಿತವಾದ್ರು. ಇನ್ನೊಂದೆಡೆ ನಾಯಕಿ ಮಿಥಾಲಿ ರಾಜ್ ಜವಾಬ್ದಾರಿಯ ಆಟವನ್ನಾಡಿದ್ರು. ಅಲ್ಲದೆ 57 ರನ್ ಕೂಡ ದಾಖಲಿಸಿದ್ರು. ಇನ್ನುಳಿದಂತೆ ಹರ್ಮನ್ ಪ್ರೀತ್ ಕೌರ್ 19 ರನ್ ಹಾಗೂ ಜುಲಾನ್ ಗೋಸ್ವಾಮಿ ಅಜೇಯ 19 ರನ್ ದಾಖಲಿಸಿದ್ರು. ಇನ್ನುಳಿದ ಆಟಗಾರ್ತಿಯರು ಒಂದಂಕಿ ಮೊತ್ತಕ್ಕೆ ಸೀಮಿತವಾದ್ರು. ಅಂತಿಮವಾಗಿ ಭಾರತ ಮಹಿಳಾ ತಂಡ ನಿಗದಿತ 50 ಓವರ್ ಗಳಲ್ಲಿ 221 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.
ಸವಾಲನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ ಮಹಿಳಾ ತಂಡ 47.3 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು.
ಇಂಗ್ಲೆಂಡ್ ತಂಡ ಪರ ಲಾರೇನ್ ವಿನ್ ಫಿಲ್ಡ್ 42 ರನ್ ಸಿಡಿಸಿದ್ರು. ಹಾಗೇ ಟಾಮಿ ಬ್ಯುಮೌಂಟ್ 10 ರನ್, ನಾಯಕಿ ಹಿಥರ್ ನೈಟ್ 10 ರನ್ ಹಾಗೂ ನಾಟಲಿ 10 ರನ್ ಮತ್ತು ಎಲೆನ್ ಜೋನ್ಸ್ 28 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು. ಆಗ ಇಂಗ್ಲೆಂಡ್ ತಂಡ 28.5 ಓವರ್ ಗಳಲ್ಲಿ ಐದು ವಿಕೆಟ್ ಕಳೆದು 133 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು.
ಬಳಿಕ ಸೋಫಿಯಾ ಡುಂಕ್ಲೆ ಮತ್ತು ಕ್ಯಾಥರಿನ್ ಬ್ರುಂಟ್ ಅವರು ಆರನೇ ವಿಕೆಟ್ ಗೆ ಅಜೇಯ 92 ರನ್ ಗಳಿಸಿದ್ರು. ಸೋಫಿಯಾ ಡುಂಕ್ಲೆ ಅಜೇಯ 73 ರನ್ ದಾಖಲಿಸಿದ್ರೆ, ಕ್ಯಾಥರಿನ್ ಅಜೇಯ 33 ರನ್ ಗಳಿಸಿದ್ರು.
ಈ ಗೆಲುವಿನೊಂದಿಗೆ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 2-0ಯಿಂದ ಮುನ್ನಡೆ ಪಡೆದುಕೊಂಡಿದೆ