2016 ರಲ್ಲಿ ಫ್ರಾನ್ಸ್ ಹಾಗೂ ಭಾರತದ ನಡುವಿನ ಮಹತ್ವದ ಒಪ್ಪಂದದಂತೆ ಈಗಾಗಲೇ ಮೊದಲ ಹಂತದ 4 ರಫೇಲ್ ಯುದ್ಧವಿಮಾನಗಳು ಭಾರತ ವಾಯುನೆಲೆಗೆ ಬಂದಿಳಿದಿವೆ. ಇದೀಗ 2ನೇ ಹಂತದ ರಫೇಲ್ ವಿಮಾನಗಳು ಸೆಪ್ಟೆಂಬರ್ 10 ರಂದು ಭಾರತಕ್ಕೆ ಬರಲಿದ್ದು, ಅಧಿಕೃತವಾಗಿ ಭಾರತದ ಸೇನೆಗೆ ಸೇರ್ಪಡೆಯಾಗಲಿವೆ.
![]()
ಆ ದಿನ ಹರಿಯಾಣದ ಅಂಬಾಲದ ವಾಯನೆಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಎರೆಡೂ ರಾಷ್ಟ್ರಗಳ ರಕ್ಷಣಾ ಮಂತ್ರಿಗಳು ಭಾಗವಹಿಸಲಿದ್ದಾರೆ. ಇನ್ನೂ 2016ರಲ್ಲಿ ಭಾರತ 36 ರಫೇಲ್ ಜೆಟ್ ಗಳ ಖರೀದಿಗೆ ಫ್ರಾನ್ಸ್ ನೊಂದಿಗೆ ಬರೋಬ್ಬರಿ 56 ಸಾವಿರ ಕೊಟಿ ರೂಪಾಯಿಯ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಕಳೆದ ಜುಲೈ 29ರಂದು 5 ಯುದ್ಧ ವಿಮಾನಗಳು ಭಾರತದ ವಾಯುನೆಲೆ ಪ್ರವೇಶಿಸಿದ್ದವು. ಇದೀಗ 2ನೇ ಹಂತದ ಸುಮಾರು 4 ಯುದ್ಧ ವಿಮಾನಗಳು ಸೆಪ್ಟೆಂಬರ್ 10ಕ್ಕೆ ಬರಲಿದ್ದು, ಭಾರತದ ಸೇನೆಗೆ ಆನೆ ಬಲ ಬರಲಿದೆ.









