Bangalore | ಬಂಟರ ಸಂಘ ಬೆಂಗಳೂರು ವತಿಯಿಂದ 2ನೇ ವರ್ಷದ ಸೇವಾ ಚೇತನ ಕಾರ್ಯಕ್ರಮ
ಬೆಂಗಳೂರು : ದುಡ್ಡಿಗಿಂತ ಮನುಷ್ಯತ್ವ ಮುಖ್ಯ.. ಡಾಕ್ಟರ್ ಆದವರಿಗೆ ಮನಸ್ಸಿರಬೇಕು , ಮಾನವೀಯತೆ ಇರಬೇಕು. ದುಡ್ಡಿನ ಹಿಂದೆ ಯಾವತ್ತೂ ಹೋಗಬಾರದು. ದುಡ್ಡು ಬರೋದಿದ್ರೆ ಅದೇ ನಮ್ಮ ಹಿಂದೆ ಬರುತ್ತೆ. ಮನುಷ್ಯತ್ವ ಇಲ್ಲದವರು ಡಾಕ್ಟರ್ ಆಗಲೇಬಾರದು ಎಂದು ಕಿದ್ವಾಯಿ ಸ್ಮಾರಕ ಗಂಥ ಸಂಸ್ಥೆ ನಿರ್ದೇಶಕ ಡಾ.ಸಿ.ರಾಮಚಂದ್ರ ಪ್ರತಿಪಾದಿಸಿದ್ದಾರೆ.
ಬಂಟರ ಸಂಘ ಬೆಂಗಳೂರು ವತಿಯಿಂದ 2ನೇ ವರ್ಷದ ಸೇವಾ ಚೇತನ ಸಮಾರೋಪ ಕಾರ್ಯಕ್ರಮದಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸೇವಾ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಿದ್ವಾಯಿ ಸ್ಮಾರಕ ಗಂಥ ಸಂಸ್ಥೆ ನಿರ್ದೇಶಕರಾದ ಡಾ.ಸಿ.ರಾಮಚಂದ್ರ, ಭಾರತ ಸರ್ಕಾರದ ಕಾರ್ಮಿಕ ಕಲ್ಯಾಣ ಇಲಾಖೆ ಆಯುಕ್ತರಾದ ಎನ್.ಮಂಜುನಾಥ್, ಸುವರ್ಣ ಟಿವಿಯ ಸಂಪಾದಕರಾದ ಜಯಪ್ರಕಾಶ್ ಶೆಟ್ಟಿ ಉಪ್ಪಳ ಅವರಿಗೆ ಸನ್ಮಾನ ಮಾಡಲಾಯಿತು.
ಸನ್ಮಾನದ ಬಳಿಕ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಡಾ.ಸಿ.ರಾಮಚಂದ್ರ ಅವರು, ನಮ್ಮ ಕೆಲಸ ನಾವು ಮಾಡಿದ್ದೇವೆ. ನಾವೇನು ಹೆಚ್ಚಿಗೆ ಮಾಡಿಲ್ಲ, ನಮ್ಮ ಕೆಲಸ ನಾವು ಮಾಡಿದ್ದೇವೆ. ಈ ನಡುವೆ ನಮ್ಮನ್ನ ಕರೆದು ಸನ್ಮಾನಿಸಿದ್ದು, ಖುಷಿ ತಂದಿದೆ. ಇದಕ್ಕೆ ನಿಮಗೆ ಧನ್ಯವಾದ. ನಾನು ಯಾವಾಗಲೂ ಹೇಳುತ್ತಿರುತ್ತೇನೆ, ಡಾಕ್ಟರ್ ಆದವರಿಗೆ ಮನಸ್ಸಿರಬೇಕು , ಮಾನವೀಯತೆ ಇರಬೇಕು. ದುಡ್ಡಿನ ಹಿಂದೆ ಯಾವತ್ತೂ ಹೋಗಬಾರದು. ಮನುಷ್ಯ ಹೇಗೆ ಬೇಕಾದರೂ ಹಣ ಮಾಡಬಹುದು. ಆದ್ರೆ ಎಲ್ಲರಿಗೂ ಒಳ್ಳೆ ವ್ಯಕ್ತಿತ್ವ ಎಲ್ಲರೂ ಒಳ್ಳೆ ವ್ಯಕ್ತಿಗಳಾಗೋಕೆ ಸಾಧ್ಯವಿಲ್ಲ. ಮಕ್ಕಳಲ್ಲಿ ಮಾನವೀಯತೆಯನ್ನ ಬೆಳಸಬೇಕು ಎಂದು ಕರೆಕೊಟ್ಟರು.
ನಾವು ಯಾವುದೋ ವ್ಯಾಮೋಹಕ್ಕೆ ಒಳಗಾಗಿ ಒಂದು ಸಮುದಾಯ ಎಂದು ವಿರೋಧಿಸುವುದು ತಪ್ಪು. ಯಾವ ಸಮುದಾಯವೂ ಕೆಟ್ಟದಲ್ಲ, ಯಾವ ಮನುಷ್ಯನೂ ಹುಟ್ಟಿನಿಂದ ಕೆಟ್ಟವರಲ್ಲ, ಸಮಯ ಸಂದರ್ಭ ಎಲ್ಲವನ್ನು ಅವಲಂಭಿಸಿರುತ್ತದೆ. ಸೇ ನೋ ಟು ಟೆರರಿಸಂ , ಸೇ ನೋ ಟು ವಾರ್. ಕೊಲೆ ಮಾಡೋದಕ್ಕೆ ಸುಮಾರು ಜನರನ್ನ ಟ್ರೇನ್ ಮಾಡೋದು ಮನುಷ್ಯತ್ವದ ಧರ್ಮವಲ್ಲ. ಮನುಷ್ಯರಾದದವರು, ಒಬ್ಬರಿಗೊಬ್ಬರು ಸಹಾಯ ಮಾಡಬೇಕು , ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಹೇಳಿದರು.
ಇದಕ್ಕು ಮೊದಲು ಬಂಟರ ಸಂಘ ಬೆಂಗಳೂರು, ಸಮಾಜ ಸೇವಾ ಸಮಿತಿ ಮತ್ತು ಸೇವಾದಳ ವತಿಯಿಂದ ಉಚಿತ ವಿವಿಧ ವೈದ್ಯಕೀಯ ತಪಾಸಣಾ ಶಿಬಿರವನ್ನ ನಡೆಸಲಾಗಿತು. ಈ ಶಿಬಿರವನ್ನು ಅಬಕಾರಿ ಇಲಾಖೆ ಸಚಿವರಾದ ಕೆ.ಗೋಪಾಲಯ್ಯ ಅವರು ಉದ್ಘಾಟಿಸಿ ಶುಭಕೋರಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಡಾ.ಮಹೇಶ್ ಜೋಶಿ, ಖ್ಯಾತ ಆಯುರ್ವೇದ ತಜ್ಷರು, ಪ್ರಶಾಂತಿ ಆಯುರ್ವೇದಿಕ್ ಆಸ್ಪತ್ರೆಯ ಸಂಸ್ಥಾಪಕರಾದ ಡಾ ಗಿರಧರ ಕಜೆ, ಬೆಂಗಳೂರು ಬಂಟ ಸಂಘದ ಅಧ್ಯಕ್ಷ ಆರ್ ಉಪೇಂದ್ರ ಶೆಟ್ಟಿ, ಕಾರ್ಯದರ್ಶಿ ಮಧುಕರ್ ಎಂ ಶೆಟ್ಟಿ, ಸಮಾಜ ಸೇವಾ ಸಮಿತಿ ಮತ್ತು ಸೇವಾದಳ ಚೇರ್ ಪರ್ಸನ್ ಉಮೇಶ್ ಶೆಟ್ಟಿ, ಸಂಚಾಲಕರಾದ ಅಜಿತ್ ಶೆಟ್ಟಿ ಉಳ್ತೂರು, ಭಾಸ್ಕರ್ ಶೆಟ್ಟಿ ಉಪಸ್ಥಿತರಿದ್ದರು.
2nd Year Seva Chetana Program by Bantara Sangha Bangalore